ದೇಶದ ಬಹುತೇಕ ಭಾಗಗಳಲ್ಲಿ ಶೀತಗಾಳಿಯ (Cold Wave) ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ಈ ಕೆಳಗಿನ ರಾಜ್ಯಗಳಲ್ಲಿ ತೀವ್ರ ಚಳಿ ಇರಲಿದೆ ರಾಜಧಾನಿ ವಲಯ: ದೆಹಲಿ, ಹರಿಯಾಣ ಮತ್ತು ಚಂಡೀಗಢ. ಉತ್ತರ ಭಾರತ: ಪಂಜಾಬ್, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ.ಮಧ್ಯ ಮತ್ತು ಪೂರ್ವ ಭಾರತ: ಮಧ್ಯಪ್ರದೇಶ, ಛತ್ತೀಸ್ಗಢ, ಜಾರ್ಖಂಡ್ ಮತ್ತು ಒಡಿಶಾ ಪ್ರದೇಶಗಳಲ್ಲಿ ತೀವ್ರ ಚಳಿ ಸಂಭವಿಸಲಿದೆ.ಈ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಕುಸಿಯಲಿದ್ದು, ಮುಂಜಾನೆ ದಟ್ಟ ಮಂಜು ಮುಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.