ಇದಲ್ಲದೆ, ಭಾರತದಲ್ಲಿ ಟೆಲಿಗ್ರಾಮ್ ಯಾವುದೇ ಅಧಿಕೃತ ಕಚೇರಿಯನ್ನು ಹೊಂದಿಲ್ಲದಿರುವುದರಿಂದ, ಅದು ಕಾನೂನು ನೋಟಿಸ್ಗಳಿಗೆ ಮತ್ತು ತನಿಖೆಗಳಿಗೆ ತಕ್ಷಣವೇ ಸ್ಪಂದಿಸುವುದು ತೀರಾ ವಿರಳವಾಗಿದೆ. ಇತ್ತೀಚಿನ ದಿನಗಳಲ್ಲಿ ಟೆಲಿಗ್ರಾಮ್ ತನ್ನ ನಿಯಮಗಳನ್ನು ಕಠಿಣಗೊಳಿಸುತ್ತಿದ್ದು, ಪ್ರತಿದಿನ 80,000 ದಿಂದ 1.5 ಲಕ್ಷ ವಿವಾದಾತ್ಮಕ ಚಾನೆಲ್ಗಳನ್ನು ಬ್ಲಾಕ್ ಮಾಡುತ್ತಿದ್ದರೂ ಸಹ, ನೀಟ್ನಂತಹ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ರಾಷ್ಟ್ರವ್ಯಾಪಿ ಪರೀಕ್ಷೆಗಳ ಭದ್ರತೆ ಮತ್ತು ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಸದ್ಯಕ್ಕೆ ವಾಟ್ಸ್ಆ್ಯಪ್ ಅನ್ನು ಬಿಟ್ಟು ಟೆಲಿಗ್ರಾಮ್ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳುವುದು ಸೂಕ್ತ ಮತ್ತು ಅನಿವಾರ್ಯ ಎಂಬ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಬಂದಿದೆ, (ಏಜೆನ್ಸೀಸ್).