ಬಾಬಾ ವಂಗಾ ಹೇಳಿದ ಆ ಡೆಡ್ಲಿ ವೈರಸ್ ಬಂದೇ ಬಿಡ್ತಾ? ಮತ್ತೊಮ್ಮೆ ಬರಲಿದೆಯೇ ಹೆಲ್ತ್​ ಎಮರ್ಜೆನ್ಸಿ? ಇಲ್ಲಿದೆ ಸ್ಫೋಟಕ ಮಾಹಿತಿ... Baba Vanga

ಬಾಬಾ ವಂಗಾ ಹೇಳಿದ ಆ ಡೆಡ್ಲಿ ವೈರಸ್ ಬಂದೇ ಬಿಡ್ತಾ? ಮತ್ತೊಮ್ಮೆ ಬರಲಿದೆಯೇ ಹೆಲ್ತ್​ ಎಮರ್ಜೆನ್ಸಿ? ಇಲ್ಲಿದೆ ಸ್ಫೋಟಕ ಮಾಹಿತಿ... Baba Vanga
ಬಾಬಾ ವಂಗಾ ಹೇಳಿದ ಆ ಡೆಡ್ಲಿ ವೈರಸ್ ಬಂದೇ ಬಿಡ್ತಾ? ಮತ್ತೊಮ್ಮೆ ಬರಲಿದೆಯೇ ಹೆಲ್ತ್​ ಎಮರ್ಜೆನ್ಸಿ? ಇಲ್ಲಿದೆ ಸ್ಫೋಟಕ ಮಾಹಿತಿ... Baba Vanga
Published on

ಪ್ರಮುಖ ಮುಖ್ಯಾಂಶಗಳು

  • ಬಾಬಾ ವಂಗಾ ನುಡಿದಿದ್ದಾರೆ ಎನ್ನಲಾದ 2026ರ ಭಯಾನಕ ಮುನ್ಸೂಚನೆಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಲ್ಲಿವೆ
  • 2025-2027ರ ನಡುವೆ ಔಷಧಿಗೆ ಮಣಿಯದ ವೈರಸ್‌ಗಳು ದಾಳಿ ಇಟ್ಟು ಆರೋಗ್ಯ ವ್ಯವಸ್ಥೆ ಕುಸಿಯುವಂತೆ ಮಾಡಲಿವೆ ಎನ್ನಲಾಗಿದೆ
  • ಇತ್ತೀಚಿನ 'ಹಂಟಾವೈರಸ್' ಮತ್ತು 'ನೋರೋವೈರಸ್' ಸಾಂಕ್ರಾಮಿಕಗಳನ್ನು ನೆಟ್ಟಿಗರು ಈ ಭವಿಷ್ಯವಾಣಿಗೆ ಲಿಂಕ್ ಮಾಡುತ್ತಿದ್ದಾರೆ
  • ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ಎಲ್ಲೂ ಈ ವೈರಸ್‌ಗಳ ಹೆಸರುಗಳನ್ನು ನಿರ್ದಿಷ್ಟವಾಗಿ ಹೇಳಿರಲಿಲ್ಲ
Baba Vanga : ತಮ್ಮ ಭವಿಷ್ಯವಾಣಿಗಳಿಂದಲೇ ವಿಶ್ವವಿಖ್ಯಾತಿಯಾಗಿರುವ ಬಾಬಾ ವಂಗಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪ್ರಸಕ್ತ 2026ನೇ ವರ್ಷಕ್ಕೆ ಸಂಬಂಧಿಸಿದಂತೆ ಅವರು ಹಿಂದೆಯೇ ನುಡಿದಿದ್ದ ಕೆಲವು ಭಯಾನಕ ಭವಿಷ್ಯವಾಣಿಗಳು ಮತ್ತು ಮುನ್ಸೂಚನೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಹೊಸ ಆತಂಕ ಹಾಗೂ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
ಡಯಾನಾ ರಾಜಕುಮಾರಿಯ ಸಾವು ಹಾಗೂ ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಮಟ್ಟದ ಹಲವು ಪ್ರಮುಖ ಘಟನೆಗಳನ್ನು ನಿಖರವಾಗಿ ಊಹಿಸಿದ್ದ ಕೀರ್ತಿ ಬಾಬಾ ವಂಗಾ ಅವರ ಭವಿಷ್ಯವಾಣಿಗೆ ಇದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಅವರ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ ನೆಟ್ಟಿಗರು ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, 2025 ರಿಂದ 2027ರ ನಡುವಿನ ಅವಧಿಯಲ್ಲಿ ಮಾನವಕುಲವು "ಸಂಪೂರ್ಣವಾಗಿ ಗೊಂದಲಮಯವಾದ ವೈದ್ಯಕೀಯ ಪರಿಸ್ಥಿತಿಗಳನ್ನು" ಎದುರಿಸಲಿದೆ ಎಂದು ಬಾಬಾ ವಂಗಾ ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಚಿಕಿತ್ಸೆ ಅಥವಾ ಔಷಧಿಗೆ ಮಣಿಯದೆ ಅತ್ಯಂತ ವೇಗವಾಗಿ ಹರಡುವ ಅಪಾಯಕಾರಿ ವೈರಸ್‌ಗಳು ಈ ಅವಧಿಯಲ್ಲಿ ದಾಳಿ ಮಾಡಲಿದ್ದು, ಇವು ಇಡೀ ಜಾಗತಿಕ ಆರೋಗ್ಯ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಕುಸಿಯುವಂತೆ ಮಾಡಲಿವೆ ಎಂದು ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ ಎಂದು ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಅಂದಹಾಗೆ, ಬಾಬಾ ವಂಗಾ ಅವರು ಮುನ್ಸೂಚನೆ ನೀಡಿದ್ದ ಆ 'ಭಯಾನಕ ಹಾಗೂ ಕರಾಳ ಯುಗ' ಈಗಾಗಲೇ ಜಗತ್ತಿನಲ್ಲಿ ಆರಂಭವಾಗಿದೆಯೇ ಎಂಬ ಅನುಮಾನಗಳು ಮತ್ತು ಚರ್ಚೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಎದ್ದಿವೆ.
ಹೌದು, ವಿಶ್ವದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ದಿಢೀರನೆ ಕಾಣಿಸಿಕೊಂಡಿರುವ 'ಹಂಟಾವೈರಸ್' (Hantavirus) ಹಾಗೂ 'ನೋರೋವೈರಸ್' (Norovirus) ಸಾಂಕ್ರಾಮಿಕಗಳನ್ನು ಜನರು ಬಾಬಾ ವಂಗಾ ಅವರ ಭವಿಷ್ಯವಾಣಿಗೆ ಹೋಲಿಸಿ ನೋಡುತ್ತಿದ್ದಾರೆ. ಯಾವುದೇ ವೈದ್ಯಕೀಯ ಚಿಕಿತ್ಸೆಗೂ ಮಣಿಯದ ವೈರಸ್‌ಗಳ ಬಗ್ಗೆ ಅಂದೇ ಬಾಬಾ ವಂಗಾ ಎಚ್ಚರಿಸಿದ್ದ ಕರಾಳ ಮುನ್ಸೂಚನೆಗಳು ಇವೇ ಇರಬಹುದೇ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚಿಸುತ್ತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸತ್ಯ ಏನು?

ಇಂಟರ್ನೆಟ್‌ನಲ್ಲಿ ಈ ಆತಂಕದ ಚರ್ಚೆಗಳು ತೀವ್ರವಾಗಿ ಹರಡುತ್ತಿರುವುದರ ನಡುವೆಯೇ ಪ್ರತಿಯೊಬ್ಬರೂ ಒಂದು ಪ್ರಮುಖ ಸತ್ಯವನ್ನು ಗಮನಿಸುವುದು ಅತ್ಯಗತ್ಯವಾಗಿದೆ. ಅದೇನೆಂದರೆ, ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ಎಲ್ಲೂ 'ಹಂಟಾವೈರಸ್' ಅಥವಾ 'ನೋರೋವೈರಸ್' ಎಂಬ ಹೆಸರುಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರು ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಆಗಸ್ಟ್ 11, 1996 ರಂದೇ ಬಲ್ಗೇರಿಯಾದಲ್ಲಿ ನಿಧನರಾದ ಬಾಬಾ ವಂಗಾ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಮುನ್ಸೂಚನೆಗಳಿಗೂ ಮತ್ತು ಪ್ರಸ್ತುತ ಜಗತ್ತಿನಲ್ಲಿ ಕಾಣಿಸಿಕೊಂಡಿರುವ ವೈರಸ್‌ಗಳಿಗೂ ಜನರೇ ತಾವಾಗಿಯೇ ಹೋಲಿಕೆಗಳನ್ನು ಸೃಷ್ಟಿಸುತ್ತಿದ್ದಾರೆಯೇ ವಿನಃ, ಇವುಗಳ ನಡುವೆ ಸಂಬಂಧವಿದೆ ಎಂದು ಸಾಬೀತುಪಡಿಸಲು ಯಾವುದೇ ಗಟ್ಟಿ ಪುರಾವೆಗಳಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

2026ರ ಇನ್ನಿತರ ಭವಿಷ್ಯವಾಣಿಗಳು

ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ಬಾಬಾ ವಂಗಾರ ಇನ್ನುಳಿದ 2026ರ ಭವಿಷ್ಯವಾಣಿಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಬಾಬಾ ವಂಗಾ ಹೇಳಿದಂತೆ ಈ ವರ್ಷ ರಷ್ಯಾದಲ್ಲಿ ಹೊಸ ನಾಯಕ ಹೊರಹೊಮ್ಮುತ್ತಾನೆ. ಆ ನಾಯಕನನ್ನು ಜನರು ವಿಶ್ವ ನಾಯಕ ಎಂದು ಆಚರಿಸುತ್ತಾರಂತೆ. ಆತ ಅಂತಾರಾಷ್ಟ್ರೀಯ ಶಕ್ತಿ ಸಮೀಕರಣವನ್ನು ಬದಲಾಯಿಸುತ್ತಾನಂತೆ. ಜನರು ಹೆಚ್ಚು ಇಷ್ಟಪಡುವ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಬೆಲೆಗಳು ಅನಿರೀಕ್ಷಿತವಾಗಿ ಏರಿಕೆಯಾಗುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದು ಸಾಮಾನ್ಯ ಜನರಿಗೆ ತೊಂದರೆ ತರುತ್ತದೆ. ಅಲ್ಲದೆ, ಬ್ಯಾಂಕ್ ಸಂಸ್ಥೆಗಳ ಕುಸಿತ, ಬೆಲೆ ಏರಿಕೆ ಮತ್ತು ಹಣಕಾಸು ವ್ಯವಸ್ಥೆಯು ತೀವ್ರ ಸಂಕಷ್ಟ ಎದುರಿಸಲಿದೆ. ಇನ್ನು ಚಿನ್ನದ ಬೆಲೆಯು ಅಸಾಧಾರಣವಾಗಿ ಏರಿದ ನಂತರ ಕುಸಿಯಬಹುದು ಅಂತಾನೂ ಬಾಬಾ ವಂಗಾ ಹೇಳಿದ್ದಾರೆ. 2026ರ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಬಾಹ್ಯಾಕಾಶ ನೌಕೆ ಭೂಮಿಯನ್ನು ಸಮೀಪಿಸಲಿದೆ ಎಂದು ಊಹಿಸಲಾಗಿದೆ. ಇದು ಮಾನವರು ಮತ್ತೊಂದು ಪ್ರಪಂಚದೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಮತ್ತು ಅನ್ಯಗ್ರಹ ಜೀವಿಗಳು ಮನುಷ್ಯರೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ರೀತಿಯ ಇನ್ನು ಸಾಕಷ್ಟು ಭವಿಷ್ಯವಾಣಿಗಳನ್ನು ಬಾಬಾ ವಂಗಾ ನುಡಿದಿದ್ದಾರೆ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net