ಕಳೆದ ಕೆಲವು ತಿಂಗಳುಗಳಿಂದ ಆರ್ಜೆಡಿ ನಾಯಕತ್ವದೊಂದಿಗೆ, ವಿಶೇಷವಾಗಿ ತೇಜಸ್ವಿ ಯಾದವ್ರೊಂದಿಗೆ ವೈಮನಸ್ಸು ಹೆಚ್ಚಾಗಿತ್ತು ಎನ್ನಲಾಗಿದ್ದು, 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪರಿಹಾರ್ ಕ್ಷೇತ್ರದಿಂದ ಆರ್ಜೆಡಿ ಟಿಕೆಟ್ ನಿರಾಕರಿಸಿದ್ದೇ ಈ ಭಿನ್ನಾಭಿಪ್ರಾಯಕ್ಕೆ ಪ್ರಮುಖ ಕಾರಣವಾಗಿತ್ತು. ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಜೈಸ್ವಾಲ್, ನಾಯಕತ್ವದ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರಿಗೆ ಜಯ ಸಿಗಲಿಲ್ಲ. ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ಬಂಡಾಯವೆದ್ದ ಈ ನಡವಳಿಕೆಯನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿದ ಆರ್ಜೆಡಿ, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು.