ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮಾತನಾಡಿರುವ ಅವರು, ಎಸ್ಐಆರ್ ನಡೆಸಲು ಆಯೋಗವು ಎಲ್ಲಾ ರೀತಿಯ ತಪ್ಪು ಕ್ರಮಗಳನ್ನು ಅವಲಂಬಿಸಿದೆ. ಅರ್ಹ ಮತದಾರರನ್ನು ಮೃತಪಟ್ಟವರು ಎಂದು ಗುರುತಿಸುತ್ತಿದೆ. ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಅಸ್ವಸ್ಥರನ್ನು ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸುತ್ತಿದೆ. ಬಿಜೆಪಿಯ ಐಟಿ ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅನ್ನು ಈ ಪ್ರಕ್ರಿಯೆ ಬಳಸಿದೆ. ಇದು ಕಾನೂನುಬಾಹಿರ, ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ವಾಗ್ದಾಳಿ ನಡೆಸಿದ್ದಾರೆ.