ಮತ್ತೊಂದೆಡೆ, ಈ ವಿಚಿತ್ರ ಘಟನೆಯನ್ನು ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಹಾಸ್ಯ ಮಾಡುತ್ತಾ ತರಹೇವಾರಿ ಕಾಮೆಂಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪಾಸ್ಪೋರ್ಟ್ ಇಲ್ಲ, ವೀಸಾ ಇಲ್ಲ ಕೇವಲ 10,000 ರೂಪಾಯಿ ಇದ್ದರೆ ಸಾಕು ಚೆನ್ನೈ ಬಸ್ನಲ್ಲೇ ದುಬೈಗೆ ಹೋಗಬಹುದು ಎಂದು ಟಿಕೆಟ್ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ. ತಮಿಳುನಾಡು ಸಾರಿಗೆ ಬಸ್ ಸೇವೆಗಳು ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿವೆ ಎಂದು ವ್ಯಂಗ್ಯವಾಡುತ್ತಿರುವ ಮೀಮ್ಸ್ ಕ್ರಿಯೇಟರ್ಗಳು, ಅಣ್ಣಾ, ಬಸ್ ನೇರವಾಗಿ ದುಬೈನ ಬುರ್ಜ್ ಖಲೀಫಾ ಮುಂಭಾಗದಲ್ಲೇ ನಿಲ್ಲುತ್ತಾ? ಎಂದು ತಮಾಷೆಯ ಮೀಮ್ಸ್ಗಳನ್ನು ಹರಿಬಿಡುತ್ತಿದ್ದಾರೆ. ಒಟ್ಟಿನಲ್ಲಿ, ತಾಂತ್ರಿಕ ದೋಷದಿಂದ ಸಂಭವಿಸಿದ ಈ ಪುಟ್ಟ ಯಡವಟ್ಟು ಪ್ರಸ್ತುತ ಅಂತರ್ಜಾಲದಲ್ಲಿ ಭಾರಿ ನಗೆಬರಹ ಹಾಗೂ ರೋಚಕ ಚರ್ಚೆಗೆ ಕಾರಣವಾಗಿರುವುದಂತೂ ನಿಜ, (ಏಜೆನ್ಸೀಸ್).