ಜೌಗು ಪ್ರದೇಶಕ್ಕೆ ಓಡಿಹೋದ ವಿಕ್ಟರ್‌ನನ್ನು ಹುಡುಕಲು ಪೊಲೀಸರು ತಕ್ಷಣವೇ ಜಂಟಿ ಕಾರ್ಯಾಚರಣೆ ಆರಂಭಿಸಿದರು. ಈ ನಡುವೆ ಆತ ಸಮೀಪದ ಹೆದ್ದಾರಿಯೊಂದರ ಬಳಿ ನಡೆದುಕೊಂಡು ಹೋಗುತ್ತಿರುವುದು ಪೊಲೀಸರ ಕಣ್ಣಿಗೆ ಬಿದ್ದಿದೆ. ಪೊಲೀಸರನ್ನು ನೋಡುತ್ತಿದ್ದಂತೆ ಗಾಬರಿಗೊಂಡ ವಿಕ್ಟರ್, ಮತ್ತೆ ತಪ್ಪಿಸಿಕೊಳ್ಳಲು ಜೌಗು ಪ್ರದೇಶದ ನೀರಿನೊಳಗೆ ನುಗ್ಗಿದ್ದಾನೆ. ಆತ ನೀರಿಗೆ ಇಳಿಯುತ್ತಿದ್ದಂತೆ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಬೃಹತ್ ಮೊಸಳೆಯೊಂದು ಆತನ ಮೇಲೆ ತೀವ್ರವಾಗಿ ದಾಳಿ ನಡೆಸಿ, ಆತನ ಎರಡೂ ಕೈಗಳನ್ನು ಕಚ್ಚಿ ತುಂಡರಿಸಿದೆ. ಈ ಭೀಕರ ದೃಶ್ಯಗಳು ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ವಿಡಿಯೋ ಬಿಡುಗಡೆಯಾದ ಬಳಿಕವೇ ಈ ಘಟನೆ ಬೆಳಕಿಗೆ ಬಂದಿದೆ.