ಮತ್ತೊಂದೆಡೆ, ಸುರಂಗದೊಳಗೆ ನುಗ್ಗಿದ ಪ್ರವಾಹದಲ್ಲಿ ತೇಲಿ ಬಂದಿರುವ ಕೆಸರು, ಕಲ್ಲು ಮತ್ತು ಬಂಡೆಗಳ ಅಡಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಗಳಿವೆ ಎಂದು ಸೇನೆ ಸ್ಪಷ್ಟಪಡಿಸಿದೆ. ಆದರೆ, ಮೇಲ್ನೋಟಕ್ಕೆ ಯಾರೂ ಕಾಣದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಸುವಾ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಒಟ್ಟು 11 ಜಲವಿದ್ಯುತ್ ಯೋಜನೆಗಳ 933ಕ್ಕೂ ಹೆಚ್ಚು ಕಾರ್ಮಿಕರು ಮಿಸ್ಸಿಂಗ್ ಪಟ್ಟಿಯಲ್ಲಿದ್ದಾರೆ. ಅವರ ಸುಳಿವಿಗೆ ನಡೆಯುತ್ತಿರುವ ವ್ಯಾಪಕ ಶೋಧ ಕಾರ್ಯದ ಭಾಗವಾಗಿಯೇ ರಸುವಾಗಧಿಯಲ್ಲೂ ಈ ಕಾರ್ಯಾಚರಣೆ ನಡೆಸಲಾಗಿತ್ತು,(ಏಜೆನ್ಸೀಸ್).