ಮಹಿಳೆಯರ ಜೀತ ಪದ್ದತಿಯ ಸಂಕೋಲೆಯನ್ನು ಮುರಿದಿದ್ದು ದ್ರಾವಿಡ ಚಳುವಳಿ; ಸಿಎಂ ಎಂ.ಕೆ.ಸ್ಟಾಲಿನ್ | CM M K Stalin

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿತ್ತು. ಇಂದು ಮಹಿಳೆಯರು ಗುಲಾಮಗಿರಿಯಿಂದ ಬಹಳ ದೂರ ಬಂದಿದ್ದು, ದ್ರಾವಿಡ ಚಳುವಳಿಯೇ ಅವರ ಜೀತ ಪದ್ದತಿಯ ಸಂಕೋಲೆಗಳನ್ನು ಮುರಿದಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(CM MK Stalin) ಹೇಳಿದ್ದಾರೆ. 
ಸೋಮವಾರ(ಡಿ. 29) ತಿರುಪ್ಪೂರು ಜಿಲ್ಲೆಯಲ್ಲಿ ನಡೆದ ಡಿಎಂಕೆ ಮಹಿಳಾ ವಿಭಾಗದ ಪಶ್ಚಿಮ ವಲಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಮುಂದಿನ ಆಡಳಿತವೂ ನಮ್ಮದೇ, ಅದರಲ್ಲಿ ಯಾವುದೇ ನಿಸ್ಸಂದೇಹ ಬೇಡ. ಡಿಎಂಕೆಯ 2.0 ಆಡಳಿತವು ತಮಿಳುನಾಡು ಮಹಿಳೆಯರಿಗಾಗಿ. ಮಹಿಳೆಯರ ಪ್ರಗತಿಯೇ ಸಮಾಜ ಯಶಸ್ಸು. ದ್ರಾವಿಡ ಚಳುವಳಿಯಿಂದಾಗಿಯೇ ಮಹಿಳೆಯರು ಕೇಂದ್ರ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಮಹಿಳೆಯರು ಆರಂಭದಿಂದಲೂ ದ್ರಾವಿಡ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ದೇವದಾಸಿ ವ್ಯವಸ್ಥೆಯನ್ನು ರದ್ದುಗೊಳಿಸಿವಿಶೇಷ ಕಾನೂನನ್ನು ಜಾರಿಗೆ ತಂದಿದ್ದೇವೆ. ಮಹಿಳೆಯರಿಗೆ ಆಸ್ತಿ ಹಕ್ಕುಗಳನ್ನು ನೀಡಿದ್ದೇವೆ. ಪ್ರಸ್ತುತ ಸಂದರ್ಭದಲ್ಲಿ ರಾಜಸ್ಥಾನದ ಯಾವುದೋ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಮೊಬೈಲ್ ಬಳಸದಂತೆ ಹೇಳುವ ಸಮಯದಲ್ಲಿ, ಇಂದು ತಮಿಳುನಾಡಿನಲ್ಲಿ ಮಹಿಳೆಯರು ಆ್ಯಪಲ್ ಫೋನ್​ಗಳನ್ನು ಜೋಡಿಸುತ್ತಿದ್ದಾರೆ. ಇದಕ್ಕೆ ಕಾರಣ ದ್ರಾವಿಡ ಚಳುವಳಿ ಮತ್ತು ನಮ್ಮ ನಾಯಕರು ತಂದ ಕ್ರಾಂತಿ ಎಂದು ಪ್ರತಿಪಾದಿಸಿದ್ದಾರೆ.
ಡಿಎಂಕೆ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರವು ಶಾಸಕಾಂಗದಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲು ಕಾನೂನನ್ನು ತಂದಿದೆ. ಅನಗತ್ಯ ಷರತ್ತುಗಳೊಂದಿಗೆ ಅದು ಯಾವಾಗ ಜಾರಿಗೆ ಬರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮಾನ್ಯತೆ ಸಿಗುವುದನ್ನು ಬಿಜೆಪಿ ಬಯಸುವುದಿಲ್ಲ, ಹಾಗಾಗಿ ತಂದಿರುವ ಕಾನೂನು ಅನುಷ್ಠಾನವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net