ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಚುನಾವಣಾ ಫಲಿತಾಂಶದ ಆಳವಾದ ವಿಶ್ಲೇಷಣೆಯನ್ನು ಮುಂದಿಟ್ಟರು. ಈ ಚುನಾವಣೆಯಲ್ಲಿ ಸುಮಾರು 4.93 ಕೋಟಿ ಜನರು ಮತ ಚಲಾಯಿಸಿದ್ದಾರೆ. ಆದರೆ, ಆಡಳಿತ ಪಕ್ಷಕ್ಕೆ ಸಿಕ್ಕಿದ್ದು ಕೇವಲ 1.72 ಕೋಟಿ ಮತಗಳು ಮಾತ್ರ. ಉಳಿದ 3.21 ಕೋಟಿ ಜನರು ನಿಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ. ಅಂದರೆ, ಶೇ. 65ರಷ್ಟು ಜನರಿಗೆ ನಿಮ್ಮ ಮೇಲೆ ನಂಬಿಕೆಯಿಲ್ಲ ಎಂದು ಗುಡುಗಿದ್ದಾರೆ.