ಆರ್ಬಿಐ ಇಂತಹದ್ದೊಂದು ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಕಾಗದದ ನೋಟುಗಳ ಮುದ್ರಣ ವೆಚ್ಚ ಮತ್ತು ಅವು ಬೇಗನೆ ಹಾಳಾಗುತ್ತಿರುವುದು. ಆರ್ಬಿಐನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ನೋಟುಗಳ ಮುದ್ರಣ ವೆಚ್ಚವು ಕಳೆದ ಹಣಕಾಸು ವರ್ಷದಲ್ಲಿದ್ದ 5,101.4 ಕೋಟಿಯಿಂದ ಪ್ರಸಕ್ತ ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, 6,372.8 ಕೋಟಿಗೆ ತಲುಪಿದೆ. ಇದರೊಂದಿಗೆ, ಮಾರುಕಟ್ಟೆಯಲ್ಲಿ ಕೊಳಕಾದ ಹಾಗೂ ಹರಿದುಹೋದ ನೋಟುಗಳ ಸಂಖ್ಯೆಯೂ ಹೆಚ್ಚಾಗಿದೆ. ಕೇವಲ ಒಂದೇ ವರ್ಷದಲ್ಲಿ ಆರ್ಬಿಐ ಬರೋಬ್ಬರಿ 23.8 ಬಿಲಿಯನ್ ಹಾನಿಗೊಳಗಾದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಇದರಲ್ಲಿ 500 ಮತ್ತು 100 ಮುಖಬೆಲೆಯ ನೋಟುಗಳೇ ಹೆಚ್ಚಾಗಿವೆ.