ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಖಾಸಗಿ ಉದ್ಯೋಗದಲ್ಲಿ ಬಡ್ತಿ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ದಾಂಪತ್ಯದಲ್ಲಿ ಪ್ರೀತಿ ಹೆಚ್ಚುವುದು. ಕೆಲಸಗಾರರ ಮೇಲೆ ಅನುಕಂಪ ಇರಲಿ. ಅಕಾಲ ಭೋಜನದಿಂದ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ಯತ್ನ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ಯಂತ್ರೋಪಕರಣಗಳ ದುರಸ್ತಿಗೆ ಅನಿರೀಕ್ಷಿತ ಖರ್ಚು. ಬಾಳೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 2

ಮಿಥುನ: ಖಾಸಗಿ ಉದ್ಯೋಗದಲ್ಲಿ ಬಡ್ತಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಚಂಚಲ ಮನಸ್ಸು. ನೂತನ ಗೃಹ ಆರಂಭಕ್ಕೆ ಚಾಲನೆ. ಶುಭಸಂಖ್ಯೆ: 2

ಕಟಕ: ನಿವೇಶನ ಖರೀದಿಗಿದ್ದ ಅಡ್ಡಿ ನಿವಾರಣೆ. ಸಿದ್ಧ ಉಡುಪು ಮಾರಾಟದಲ್ಲಿ ಆಕಸ್ಮಿಕ ಧನ ಲಾಭ. ತಾಯಿಯ ಅನಾರೋಗ್ಯ ನಿವಾರಣೆ. ಶುಭಸಂಖ್ಯೆ: 2

ಸಿಂಹ: ಗೊಂದಲ ನಿವಾರಣೆಗೆ ಹಿರಿಯರ ಸಲಹೆ ಪಡೆದು ಕೊಳ್ಳಿ. ದಿನಸಿ ಪದಾರ್ಥ ವ್ಯಾಪಾರದಲ್ಲಿ ಲಾಭ. ಶುಭಕಾರ್ಯಕ್ಕಾಗಿ ಪ್ರಯಾಣ. ಶುಭಸಂಖ್ಯೆ: 9

ಕನ್ಯಾ: ದುಷ್ಟ ಜನರಿಂದ ದೂರವಿರಿ. ಸಂಗಾತಿಯೊಂದಿಗೆ ಮನಸ್ತಾಪ ಬಗೆಹರಿಯಲಿದೆ. ಸಾಲ ತೀರಿಸಲು ಆರ್ಥಿಕ ಮೂಲ ಸಿಗಲಿದೆ. ಶುಭಸಂಖ್ಯೆ: 4

ತುಲಾ: ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಸಿಗಲಿದೆ. ಕೊಟ್ಟ ಕೆಲಸದ ಯಶಸ್ವೀ ನಿರ್ವಹಣೆಗೆ ಪ್ರಶಂಸೆ. ವಾಹನ ಮಳಿಗೆಯ ಮಾಲೀಕರಿಗೆ ಲಾಭ.ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗಸ್ಥ ಸ್ತ್ರೀಯರಿಗೆ ತಾಳ್ಮೆ ಅಗತ್ಯ. ಸಹೋದ್ಯೋಗಿಗಳ ಸಹಕಾರದಿಂದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಶುಭಸಂಖ್ಯೆ: 1

ಧನಸ್ಸು: ನಟನಾ ಕ್ಷೇತ್ರದಲ್ಲಿ ಹೆಸರು ಗಳಿಸುವಿರಿ. ಹೃದಯ ಸಂಬಂಧಿತ ರೋಗ ಶಮನ ಆಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 7

ಮಕರ: ಕುಟುಂಬದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಅಮೂಲ್ಯ ವಸ್ತು ಖರೀದಿ. ಸ್ವಯಂಕೃತ ತಪ್ಪಿನಿಂದ ಪಶ್ಚಾತಾಪ ಪಡುವಿರಿ. ಶುಭಸಂಖ್ಯೆ: 4

ಕುಂಭ: ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಲ್ಲಿ ಮುನ್ನಡೆ. ಆಹಾರ ಸೇವನೆಯಲ್ಲಿ ವಿಶೇಷ ಎಚ್ಚರವಿರಲಿ. ಶುಭಸಂಖ್ಯೆ: 7

ಮೀನ: ತಾಳ್ಮೆಯಿಂದ ಕೆಲಸ ನಿಭಾಯಿಸಿ. ಕೃಷಿಕರಿಗೆ ನಿರೀಕ್ಷಿತ ಆದಾಯ. ಹಣ್ಣು ವ್ಯಾಪಾರಿಗಳಿಗೆ ಲಾಭ. ಹಿನ್ನೆಲೆ ಗಾಯಕರಿಗೆ ಗೌರವ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net