ಮಾತನಾಡಲು ಸಮಯ ಸಿಗಲಿಲ್ಲ...ಚಕ್ರವ್ಯೂಹದಲ್ಲಿ ಸಿಲುಕಿದರೆ ಹೊರಬರುವುದು ತುಂಬಾ ಕಷ್ಟ ಎಂದ ಜಗದೀಪ್ ಧನಕರ್​ | Jagdeep Dhankhar

Jagdeep Dhankhar | ಜಗದೀಪ್ ಧನಕರ್ ( ಕೃಪೆ-ಪಿಟಿಐ)
Jagdeep Dhankhar | ಜಗದೀಪ್ ಧನಕರ್ ( ಕೃಪೆ-ಪಿಟಿಐ)
Published on
ಭೋಪಾಲ್​​: ದೇವರೇ, ಯಾರಾದರು ನಿರೂಪಣೆಯಲ್ಲಿ ಸಿಕ್ಕಿಹಾಕಿಕೊಂಡರೆ ಅವರನ್ನು ತಡೆಯಿರಿ. ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡರೆ, ಹೊರಬರುವುದು ತುಂಬಾ ಕಷ್ಟಕರವಾಗುತ್ತದೆ ಎಂದು ನಿಕಟಪೂರ್ವ ಉಪರಾಷ್ಟ್ರಪತಿ ಜಗದೀಪ್ ಧನಕರ್​ ಹೇಳಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಧನಕರ್​​​, ಸುಮಾರು ನಾಲ್ಕು ತಿಂಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಚಕ್ರವ್ಯೂಹದಲ್ಲಿ ಸಿಲುಕಿ ಹಾಕಿಕೊಂಡರೆ ಹೊರಬರುವುದು ಕಷ್ಟ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿರುವ ಮಾಜಿ ಉಪರಾಷ್ಟ್ರಪತಿಗಳು, ನಾನು ನನ್ನದೇ ಆದ ಉದಾಹರಣೆಯನ್ನು ನೀಡುತ್ತಿಲ್ಲ ಎಂಬ ಹೊಸ ಪದವನ್ನು ಸಹ ಸೇರಿಸಿದರು. ಅವರ ಮಾತುಗಳು ಅಲ್ಲಿ ನೆರೆದಿದ್ದ ಸಭಿಕರಲ್ಲಿ ನಗು ಮೂಡಿಸಿದ್ದು. ತಮ್ಮ ಮತ್ತು ಬಿಜೆಪಿ ನಡುವಿನ ಬಿರುಕಿನ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಭೂತಕಾಲವೇ ಸಾಕ್ಷಿ...

ಈ ಪುಸ್ತಕವು ನಮ್ಮ ವೈಭವಯುತ ಭೂತಕಾಲಕ್ಕೆ ಕನ್ನಡಿ ಎಂದು ಧನಖರ್, ಇದು ನಿದ್ರಿಸುತ್ತಿರುವವರನ್ನು ಜಾಗೃತಗೊಳಿಸುತ್ತದೆ. ನಮ್ಮ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ, ಅರ್ಥಮಾಡಿಕೊಳ್ಳಲು ಇಷ್ಟಪಡದ ಅಥವಾ ಪ್ರತಿಷ್ಠೆಯನ್ನು ಹಾಳು ಮಾಡಲು ಬಯಸುವ ಕೆಲವು ಜನರು ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಮ್ಮ ಭಾಷಣದ ಮಧ್ಯೆದಲ್ಲಿ, ಧನಕರ್ ಅವರಿಗೆ ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಿಂದ (OSD) ಸಂಜೆ 7.30 ಕ್ಕೆ ತಮ್ಮ ವಿಮಾನದ ಬಗ್ಗೆ ಸಂದೇಶ ಬಂದಿತು, ಇದಾದ ಮೇಲೂ ಮಾತು ಮುಂದುವರೆಸಿದ ಅವರು ವಿಮಾನದ ಬಗ್ಗೆ ಚಿಂತಿಸುತ್ತಾ ನಾನು ನನ್ನ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ. ನನ್ನ ಇತ್ತೀಚಿನ ಭೂತಕಾಲವೇ ಇದಕ್ಕೆ ಸಾಕ್ಷಿ ಎಂದರು, ಕೊನೆಯಲ್ಲಿ ವ್ಯಂಗ್ಯವಾಗಿ, ಸಮಯದ ಕೊರತೆಯಿಂದಾಗಿ, ನನಗೆ ಸಂಪೂರ್ಣವಾಗಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಜಗದೀಪ್​​ ಧನಕರ್​​ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾದ ಕೇವಲ ಒಂದು ದಿನದಲ್ಲಿ ಅನಾರೋಗ್ಯದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net