ಫಲಿತಾಂಶದ ನಂತರ ಬಂಗಾಳದಾದ್ಯಂತ ಹಿರಿಯ ನಾಯಕರ ಕಚೇರಿಗಳ ಮೇಲೆ ದಾಳಿ ಮತ್ತು ಹಿಂಸಾಚಾರ ವರದಿಯಾಗಿದೆ. ಬೀರ್‌ಭೂಮ್‌ನ ನಾನೂರ್‌ನಲ್ಲಿ ಟಿಎಂಸಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಮತ್ತೊಂದೆಡೆ, ಟೋಲಿಗಂಜ್, ಕಾಸ್ಬಾ, ಕಮರಹಟಿ ಮತ್ತು ಹೌರಾ ಸೇರಿದಂತೆ ಹಲವೆಡೆ ಟಿಎಂಸಿ ಕಚೇರಿಗಳನ್ನು ಜನಸಮೂಹ ಧ್ವಂಸಗೊಳಿಸಿದೆ. ಈ ಹಿಂಸಾಚಾರಕ್ಕೆ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ದೂಷಿಸಿಕೊಳ್ಳುತ್ತಿವೆ.