ಈ ಕುರಿತು ರಾಜಕೀಯ ಬಿರುಗಾಳಿ ಏಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಂಸದೆ ಕಾಕೋಲಿ, ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ, ಇದೊಂದು ಸರ್ಕಾರದ ಆಡಳಿತಾತ್ಮಕ ಸಭೆ. ಆಡಳಿತ ಮತ್ತು ಅಭಿವೃದ್ಧಿ ಎಂಬುದು ಇಡೀ ರಾಜ್ಯದ ಜನರಿಗೆ ಸೇರಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಜಾರಿಕೊಂಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಇವರೆಲ್ಲರೂ ಸದ್ಯದಲ್ಲೇ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಕೋಲ್ಕತ್ತಾದ ರಾಜಕೀಯ ಗಿಜಿಗುಟ್ಟುವಿಕೆಯನ್ನು ಹೆಚ್ಚಿಸಿವೆ.