ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಹೊಸ ಭಾರತ ಟಿ20 ತಂಡವನ್ನು ಪ್ರಕಟಿಸಿದೆ. ಆದರೆ, ಈ ಭವಿಷ್ಯದ ತಂಡದ ಪಟ್ಟಿಯಲ್ಲಿ ಆರ್ಸಿಬಿ ತಂಡದ ಕಣ್ಣೀರ ಕಥೆಯೊಂದು ಅಡಗಿದೆ. ಹೌದು, ಆರ್ಸಿಬಿ ತಂಡಕ್ಕೆ ಬ್ಯಾಕ್-ಟು-ಬ್ಯಾಕ್ ಅಂದರೆ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ, ರಜತ್ ಪಾಟೀದಾರ್(Rajat Patidar) ಅವರಿಗೆ ಬಿಸಿಸಿಐ ಆಯ್ಕೆಗಾರರು ಟಿ20 ತಂಡದ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ.