ಬೆಳಗ್ಗೆ ಫೋನ್​ ಮಾಡಿ ಹೇಳಿ ಈಗ ಕೈ ಕೊಟ್ಟಿದ್ದಾರೆ: ಸಚಿವ ಸ್ಥಾನ ತಪ್ಪಿದ್ದಕ್ಕೆ ಇಂಡಿ ಶಾಸಕ ರಾಜೀನಾಮೆ! MLA Yashavant Rayagoud Patil

ಬೆಳಗ್ಗೆ ಫೋನ್​ ಮಾಡಿ ಹೇಳಿ ಈಗ ಕೈ ಕೊಟ್ಟಿದ್ದಾರೆ: ಸಚಿವ ಸ್ಥಾನ ತಪ್ಪಿದ್ದಕ್ಕೆ ಇಂಡಿ ಶಾಸಕ ರಾಜೀನಾಮೆಗೆ ನಿರ್ಧಾರ! MLA Yashavant Rayagoud Patil
ಬೆಳಗ್ಗೆ ಫೋನ್​ ಮಾಡಿ ಹೇಳಿ ಈಗ ಕೈ ಕೊಟ್ಟಿದ್ದಾರೆ: ಸಚಿವ ಸ್ಥಾನ ತಪ್ಪಿದ್ದಕ್ಕೆ ಇಂಡಿ ಶಾಸಕ ರಾಜೀನಾಮೆಗೆ ನಿರ್ಧಾರ! MLA Yashavant Rayagoud Patil
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸ್ಥಾನ ಕೈತಪ್ಪಿದ್ದರಿಂದ ಮನನೊಂದು ಇಂಡಿ ಕ್ಷೇತ್ರದ ಶಾಸಕ ಯಶವಂತ ರಾಯಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ
  • ಬೆಳಗ್ಗೆ ತಾನೆ ಫೋನ್ ಮಾಡಿ ಪ್ರಮಾಣ ವಚನಕ್ಕೆ ರೆಡಿಯಾಗಿರಲು ಹೇಳಿ ಕೊನೇ ಕ್ಷಣದಲ್ಲಿ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಆಕ್ರೋಶ
  • ಎರಡೂವರೆ ವರ್ಷದ ಬಳಿಕ ಮಂತ್ರಿ ಮಾಡುವುದಾಗಿ ಹಾಗೂ ನಿಗಮ ಮಂಡಳಿ ಬೇಡವೆಂದಾಗ ನೀಡಿದ್ದ ಭರವಸೆಯನ್ನು ಹೈಕಮಾಂಡ್ ಉಳಿಸಿಲ್ಲ ಎಂದು ಬೇಸರ
  • ತಮ್ಮದೇ ಜಿಲ್ಲೆಯ ಶಾಸಕರು ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ ಎಂದು ಗಂಭೀರ ಆರೋಪ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೇರುವ ನೂತನ 20 ಸಚಿವರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್​ ಪಾಳಯದಲ್ಲಿ ಅಸಮಾಧಾನದ ಕಿಚ್ಚು ಹೊತ್ತುಕೊಂಡಿದೆ. ಬೆಳಗ್ಗೆಯಷ್ಟೇ ಫೋನ್​ ಮಾಡಿ ಪ್ರಮಾಣ ವಚನಕ್ಕೆ ರೆಡಿಯಾಗಿರಿ ಎಂದಿದ್ದರು, ಇದೀಗ ನೋಡಿದರೆ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ಹೀಗಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ್​ ( MLA Yashavant Rayagoud Patil ) ಆಕ್ರೋಶ ಹೊರಹಾಕಿದ್ದು, ಇದರ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ.  
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ 

ಯಶವಂತರಾಯಗೌಡ ಪಾಟೀಲ್ ಅವರು

 ರಾಜೀನಾಮೆ ಸಲ್ಲಿಸಿ, ನೇರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾಯಗೌಡ, ಮಧ್ಯಾಹ್ನ 3 ಗಂಟೆಗೆ ವಿಧಾನಸಭೆ ಕಾರ್ಯದರ್ಶಿಗಳನ್ನು ನೇರವಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ಹೈಕಮಾಂಡ್ ತಮಗೆ ನೀಡಿದ ಮಾತನ್ನು ಉಳಿಸಿಕೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎರಡೂವರೆ ವರ್ಷಗಳ ಬಳಿಕ ಸಚಿವರನ್ನಾಗಿ ಮಾಡುವುದಾಗಿ ಹಾಗೂ ನಿಗಮ ಮಂಡಳಿ ಹುದ್ದೆ ಬೇಡವೆಂದಾಗ ಖಂಡಿತವಾಗಿಯೂ ಮಂತ್ರಿ ಸ್ಥಾನ ನೀಡುವುದಾಗಿ ನಾಯಕರು ಈ ಹಿಂದೆ ಭರವಸೆ ನೀಡಿದ್ದರು ಎಂದು ಯಶವಂತರಾಯಗೌಡ ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಸದ್ಯದ ಈ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರಿಯಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ನಮ್ಮ ಜಿಲ್ಲೆಯ ಶಾಸಕರೇ ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಿರುವ ರಾಯಗೌಡ ಅವರು, ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಸ್ತೃತವಾಗಿ ಮಾತನಾಡಲಿದ್ದೇನೆ ಎಂದಿದ್ದಾರೆ. ಅಲ್ಲದೆ, ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ತಮ್ಮ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ತಮ್ಮ ತವರು ಇಂಡಿ ಕ್ಷೇತ್ರಕ್ಕೆ ಇದುವರೆಗೆ ಸರಿಯಾದ ನ್ಯಾಯ ಸಿಕ್ಕಿಲ್ಲವೋ ಅಥವಾ ಈ ಕ್ಷೇತ್ರಕ್ಕೆ ಯಾರದ್ದಾದರೂ ಶಾಪ ತಗುಲಿದೆಯೋ ಎಂಬ ಅನುಮಾನ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಯಾವುದೇ ಪ್ರಮುಖ ಸ್ಥಾನ ಸಿಗದೆ ಕಡೆಗಣಿಸಲ್ಪಟ್ಟಿರುವುದಕ್ಕೆ ಕಣ್ಣೀರಿಟ್ಟಿರುವ ಅವರು, ಕೊನೆಗೂ ದಿಢೀರ್ ಬೆಳವಣಿಗೆಯಿಂದ ಮನನೊಂದು ಈ ಕಠಿಣ ನಿರ್ಧಾರ ಕೈಗೊಂಡಿರುವುದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net