

ಬೆಂಗಳೂರು: ಆಹಾರ ಇಲಾಖೆಯಲ್ಲಿ ಪಡಿತರ ಧಾನ್ಯಗಳ ಸಾಗಾಣಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವಂತೆ ಆಹಾರ ಇಲಾಖೆಯ ಕಾರ್ಯದರ್ಶಿ ಎಂ.ಕನಗವಲ್ಲಿಗೆ, ಜಂಟಿ ನಿರ್ದೇಶಕ (ಐಟಿ ಜಾಗೃತಿ) ಪ್ರಸ್ತಾವನೆ ಸಲ್ಲಿಸಿದ್ದಾರೆ.
ಆಯಾ ಜಿಲ್ಲೆಗಳ ಡಿಸಿ, ಎಡಿಸಿ, ಇಲಾಖೆಯ ಜಂಟಿ ಮತ್ತು ಉಪ ನಿರ್ದೇಶಕರನ್ನು ಟೆಂಡರ್ ಆಹ್ವಾನಿಸುವ ಪ್ರಾಧಿಕಾರಕ್ಕೆ ನೇಮಿಸಬೇಕು. ಈ ರೀತಿ ವಿಕೇಂದ್ರೀಕರಣ ಮಾಡುವುದರಿಂದ ಟೆಂಡರ್ ಪ್ರಕ್ರಿಯೆ ಸುಗಮವಾಗಿ ನಡೆಯುವ ಮಾತ್ರವಲ್ಲದೆ ನ್ಯಾಯಾಲಯದ ದಾವೆಗಳನ್ನು ತ್ವರಿತವಾಗಿ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಜಂಟಿ ನಿರ್ದೇಶಕರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.