ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸುವ 82ನೇ ಏರ್ಬೋರ್ನ್ ಡಿವಿಷನ್ನ 1,000ಕ್ಕೂ ಹೆಚ್ಚು ಸೈನಿಕರು ಈಗ ಯುದ್ಧ ಭೂಮಿಗೆ ಇಳಿಯುತ್ತಿದ್ದಾರೆ. ಇವರು ಶತ್ರು ಪ್ರದೇಶಗಳಿಗೆ ನುಗ್ಗಿ ವಿಮಾನ ನಿಲ್ದಾಣ ಮತ್ತು ಆಯಕಟ್ಟಿನ ಜಾಗಗಳನ್ನು ವಶಪಡಿಸಿಕೊಳ್ಳುವಲ್ಲಿ ಪರಿಣಿತರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗಲಿಬಾಫ್, ನಿಮ್ಮ ಸೇನಾ ಜಮಾವಣೆಯನ್ನು ನಾವು ಪ್ರತಿಕ್ಷಣವೂ ಗಮನಿಸುತ್ತಿದ್ದೇವೆ. ನೆತನ್ಯಾಹು ಅವರ ಭ್ರಮೆಗೆ ನಿಮ್ಮ ಸೈನಿಕರು ಬಲಿಯಾಗಲಿದ್ದಾರೆ, ನಮ್ಮ ಭೂಮಿಯನ್ನು ರಕ್ಷಿಸುವ ನಮ್ಮ ಸಂಕಲ್ಪವನ್ನು ಪರೀಕ್ಷಿಸಬೇಡಿ ಎಂದು ಗುಡುಗಿದ್ದಾರೆ.