100ಕ್ಕೂ ಹೆಚ್ಚು ಪುರುಷರನ್ನು ಮನೆಗೆ ಕರೆಸಿ ಲೈಂಗಿಕ ಕ್ರಿಯೆ; ವಿಡಿಯೋ ಚಿತ್ರಿಸಿ ಪತಿಯಿಂದ ಬ್ಲಾಕ್​ಮೇಲ್; ದಂಪತಿ ಅರೆಸ್ಟ್

ಆರೋಪಿ ದಂಪತಿಗಳ ಚಿತ್ರ
ಆರೋಪಿ ದಂಪತಿಗಳ ಚಿತ್ರ
Published on
ಹೈದರಾಬಾದ್​: ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡುತ್ತಾ ಯುವಕರು, ಪುರುಷರನ್ನು ಸೆಳೆದು ಹನಿಟ್ರ್ಯಾಪ್​ ಮಾಡ್ತಿದ್ದ ಜಾಲವೊಂದನ್ನು ಕರೀಂನಗರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದು, ವಿಡಿಯೋ ಮಾಡಿಕೊಂಡು ಬ್ಲಾಕ್​ಮೇಲ್ ಮಾಡಿ ಹಣ ಪೀಕುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ತೆಲಂಗಾಣದ ಮಂಚೇರಿಯಲ್ ಮೂಲದ ಈ ದಂಪತಿ ಮಾರ್ಬಲ್ ಮತ್ತು ಇಂಟೇರಿಯರ್ ಕೆಲಸದಲ್ಲಿ ನಷ್ಟ ಅನುಭವಿಸಿದ ಬಳಿಕ ಸುಲಭವಾಗಿ ಹಣಗಳಿಸುವ ಸಲುವಾಗಿ ದಂಧೆಗೆ ಇಳಿದಿದ್ದಾರೆ. ಮಂಚೇರಿಯಲ್​ನಿಂದ ಕರೀಂನಗರಕ್ಕೆ ಸ್ಥಳಾಂತರಗೊಂಡ ಬಳಿಕ ದಂಪತಿ ಅರೆಪಲ್ಲಿಯಲ್ಲಿರುವ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದರು.
ಈ ವೇಳೆ ಪತ್ನಿಗೆ ಇನ್​ಸ್ಟಾಗ್ರಾಂ ಮೂಲಕ ರೀಲ್ಸ್ ಮಾಡುತ್ತಾ, ಯುವಕರನ್ನು, ಉದ್ಯಮಿಗಳನ್ನು ಪರಿಚಯ ಮಾಡಿಕೊಂಡು, ಅವರ ಜೊತೆ ಸಂಬಂಧ ಬೆಳೆಸಲು ಪತಿಯೇ ನೆರವಾಗಿದ್ದಾನೆ. ಪತ್ನಿಯ ಅರೆನಗ್ನ ಫೋಟೋ ಗಳನ್ನು ಫೇಜ್​ಗಳಲ್ಲಿ ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ.
ಹೀಗೆ ಯುವಕರು, ಪುರುಷರು, ಉದ್ಯಮಿಗಳು ಅವರನ್ನು ಸಂಪರ್ಕಿಸಿದಾಗ ಅಪಾರ್ಟ್​ಮೆಂಟ್​ನಲ್ಲಿರುವ ಮನೆಗೆ ಕರೆಸಿಕೊಂಡು ಪತ್ನಿ ಅವರ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಸೆರೆ ಹಿಡಿಯುತ್ತಿದ್ದರು ಎನ್ನಲಾಗಿದೆ. ಬಳಿಕ ವಿಡಿಯೋ ಇಟ್ಕೊಂಡು ಸಂತ್ರಸ್ತರಿಗೆ ಬ್ಲಾಕ್​​ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ.

100ಕ್ಕೂ ಹೆಚ್ಚು ಜನರಿಗೆ ಬ್ಲಾಕ್​ಮೇಲ್

ದಂಪತಿಗಳು ಹೀಗೆ ಸುಮಾರು 100ಕ್ಕೂ ಹೆಚ್ಚು ಮಂದಿ ಜೊತೆ ಪತ್ನಿ ಲೈಂಗಿಕ ಕ್ರಿಯೆ ನಡೆಸಿದ್ರೆ, ಪತಿ ಅದನ್ನು ಸೆರೆ ಹಿಡಿದು ಬ್ಲಾಕ್​ಮೇಲ್ ಮಾಡಿ ಹಣ ಸಂಗ್ರಹಿಸಿದ್ದಾರೆ. ಓರ್ವ ವ್ಯಕ್ತಿಯಿಂದ ಸುಮಾರು 12 ಲಕ್ಷ ರೂ.ಗಳನ್ನು ಪೀಕಿದ್ದು, ಅದರಿಂದ ಕಾರು, ರೆಫ್ರಿಜರೇಟರ್, ಹವಾನಿಯಂತ್ರಣ, ಸೋಫಾ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ.
ಬಳಿಕ ಅದೇ ವ್ಯಕ್ತಿ ಮತ್ತೆ 5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಕೊಲೆ ಬೆದರಿಕೆ ಹಾಕಿದ್ದಾರೆ. ಆಗ ಜೀವ ಭಯದಿಂದ ಆ ವ್ಯಕ್ತಿ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಕರೀಂನಗರ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಪೊಲೀಸರು ದಂಪತಿಯನ್ನು ಬಂಧಿಸಿದ್ದು, ಅವರಿಂದ ಕಾರು, ಹಣ, ಮೊಬೈಲ್ ಹಾಗೂ ಖಾಲಿ ಚೆಕ್​ಗಳನ್ನು ವಶಕ್ಕೆ ಪಡೆದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net