ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ; ಅವುಗಳನ್ನು ಎತ್ತಿಹಿಡಿಯಬೇಕು; ಸಂವಿಧಾನ ದಿನ ಪ್ರಧಾನಿ ಮೋದಿ ಕರೆ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on

ನವದೆಹಲಿ: ಸಾಂವಿಧಾನಿಕ ಕರ್ತವ್ಯಗಳು ದೇಶದ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ದೇಶದ ನಾಗರಿಕರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಎತ್ತಿಹಿಡಿಯಬೇಕೆಂದು ಪ್ರಧಾನಿ ನರೇಂದ್ರ ಮೋದಿ(PM Modi) ಸಂವಿಧಾನ ದಿನವಾದ ಇಂದು(ನ. 26) ಕರೆ ನೀಡಿದ್ದಾರೆ.

ಈ ಕುರಿತು ದೇಶದ ಜನತೆಗೆ ಪತ್ರ ಬರೆದಿರುವ ಅವರು, ಇಂದು 18 ವರ್ಷ ತುಂಬಿ ಮೊದಲ ಬಾರಿಗೆ ಮತದಾರರಾಗಿರುವವನ್ನು ಗೌರವಿಸುವ ಮೂಲಕ ಶಾಲೆ, ಕಾಲೇಜುಗಳು ಈ ದಿನವನ್ನು ಆಚರಿಸಬೇಕು. ಮತದಾನದ ಹಕ್ಕನ್ನು ಸಕ್ರಿಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಅದು ಸಾಮೂಹಿಕ ಜವಾಬ್ದಾರಿ ಎಂದು ಪ್ರತಿಪಾದಿಸಿದ್ದಾರೆ.

ಕರ್ತವ್ಯಗಳ ನೆರವೇರಿಕೆಯಿಂದ ಹಕ್ಕುಗಳು ಹುಟ್ಟಿಕೊಳ್ಳುತ್ತವೆ ಎಂಬ ಮಹಾತ್ಮ ಗಾಂಧಿಯವರ ನಂಬಿಕೆಯನ್ನು ನೆನಪಿಸಿಕೊಂಡಿರುವ ಪ್ರಧಾನಿ ಮೋದಿ, ಈ ಜವಾಬ್ದಾರಿಗಳನ್ನು ನಿರ್ವಹಿಸುವುದು ಭಾರತದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅತ್ಯಗತ್ಯ. ಇಂದು ತೆಗೆದುಕೊಳ್ಳುವ ನಿರ್ಧಾರಗಳು ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತವೆ. ದೇಶವು ವಿಕ್ಷಿತ ಭಾರತದ ದೃಷ್ಟಿಕೋನದತ್ತ ಸಾಗುತ್ತಿರುವಾಗ ಜನರು ತಮ್ಮ ಕರ್ತವ್ಯಗಳನ್ನು ಮುಂಚೂಣಿಯಲ್ಲಿಡಬೇಕೆಂದು ಒತ್ತಾಯಿಸಿದ್ದಾರೆ.

ಇನ್ನೂ ಎಕ್ಸ್​ನಲ್ಲಿ, ನಮ್ಮ ಸಂವಿಧಾನವು ಮಾನವ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದು ನಮಗೆ ಹಕ್ಕುಗಳೊಂದಿಗೆ ಅಧಿಕಾರ ನೀಡುವುದರ ಜೊತೆಗೆ, ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ, ಅದನ್ನು ನಾವು ಯಾವಾಗಲೂ ಪೂರೈಸಲು ಪ್ರಯತ್ನಿಸಬೇಕು. ಈ ಕರ್ತವ್ಯಗಳು ಬಲವಾದ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ದೇಶದ ಜನತೆಗೆ ಸಂವಿಧಾನ ದಿನದ ಶುಭಾಶಯ ಕೋರಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net