ರೇವತಿಯವರ ಪ್ರಕಾರ, ಅಂದು ಪೊಲೀಸರು ತಂದೆ-ಮಗನನ್ನು ಬೆತ್ತಲೆಗೊಳಿಸಿ, ಬೂಟುಗಾಲುಗಳಿಂದ ತುಳಿದು, ಸಿಕ್ಕ ಸಿಕ್ಕ ವಸ್ತುಗಳಿಂದ ಮನಬಂದಂತೆ ಹೊಡೆದಿದ್ದರು. ಸಂತ್ರಸ್ತರು ನೋವಿನಿಂದ ಕಿರುಚಾಡುತ್ತಿದ್ದಾಗ ಪೊಲೀಸರು ಮದ್ಯ ಸೇವಿಸುತ್ತಾ ವಿಕೃತಿ ಮೆರೆದಿದ್ದರು. ರೇವತಿ ಅವರು ಗಾಯಗೊಂಡಿದ್ದ ಜಯರಾಜ್‌ಗೆ ಕಾಫಿ ನೀಡಲು ಮುಂದಾದಾಗ, ಇತರ ಪೊಲೀಸರು ಅದನ್ನು ಕಿತ್ತೆಸೆದಿದ್ದ ಬಗ್ಗೆ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).