

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಇತ್ತೀಚೆಗೆ ತಮ್ಮ ತವರು ರಾಜ್ಯವಾದ ಅರುಣಾಚಲ ಪ್ರದೇಶದ ನದಿಯೊಂದರಲ್ಲಿ ಈಜುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಅರುಣಾಚಲ ಪ್ರದೇಶದ ವೇಗವಾಗಿ ಹರಿಯುವ ನದಿ ನೀರಿನಲ್ಲಿ ಈಜಲು ಅಳವಡಿಸಿಕೊಳ್ಳಬೇಕಾದ ತಂತ್ರಗಳನ್ನು ವಿವರಿಸಿದ್ದ ಅವರು, ತಮ್ಮನ್ನು ತಾವು ಖಿಲಾಡಿ ಎಂದು ಕರೆದುಕೊಂಡಿದ್ದರು. ಬುಧವಾರ ಭಾರಿ ಮಳೆಯ ನಂತರ ಸಂಸತ್ತಿನ ಸಂಕೀರ್ಣ ಜಲಾವೃತಗೊಂಡ (Parliament Water logging) ವಿಡಿಯೋಗಳು ವೈರಲ್ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ರಿಜಿಜು ಅವರ ಈ ವಿಡಿಯೋ ತುಣುಕನ್ನು ಬಳಸಿ ಅವರ ಕಾಲೆಳೆದಿದೆ.
ಅಲ್ಲದೆ ತಮ್ಮ ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಪ್ರಧಾನಿಗಳ ಮಿತವ್ಯಯದ ಕ್ರಮಗಳಿಂದಾಗಿ ಹೊಸ ಸಂಸತ್ ಭವನವು ಒಳಾಂಗಣ ವಾಟರ್ ಪಾರ್ಕ್ ಆಗಿ ಬದಲಾಗಿದೆ, ಇದರಿಂದಾಗಿ ಅವರ ಸಚಿವರು ರೀಲ್ಗಳನ್ನು ಶೂಟ್ ಮಾಡಬಹುದು ಎಂದು ಲೇವಡಿ ಮಾಡಿದೆ. ಜೆನ್-ಜೀ ಮತದಾರರನ್ನು ಸೆಳೆಯಲು ರೀಲ್ಸ್ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ಗಮನ ಹರಿಸುವಂತೆ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಎನ್ಡಿಎ ಸಚಿವರಿಗೆ ನೀಡಿದ್ದ ಸಂದೇಶಕ್ಕೆ ಕಾಂಗ್ರೆಸ್ ಈ ರೀತಿ ಟಾಂಗ್ ನೀಡಿದೆ.
ವಿವಾದದ ಮೂಲ!...
ಕೆಲವು ಗಂಟೆಗಳ ನಂತರ, ಅದೇ ಪೋಸ್ಟ್ಗೆ ಪ್ರತಿಕ್ರಿಯಿಸಿದ ರಿಜಿಜು, ಅರುಣಾಚಲ ನದಿಗಳಲ್ಲಿ ಈಜುವುದು ಯಮುನಾ ಅಥವಾ ಸಾಮಾನ್ಯ ಈಜುಕೊಳಗಳಲ್ಲಿ ಈಜುವಂತಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ಈ ಕೆಲಸದಲ್ಲಿ ತಮ್ಮನ್ನು ತಾವು ಪ್ರೊ ಎಂದು ಕರೆದುಕೊಂಡಿದ್ದರು. ಕೆಲವು ಜನರು ಅರುಣಾಚಲ ಪ್ರದೇಶದ ರಭಸವಾಗಿ ಹರಿಯುವ ನದಿಗಳಲ್ಲಿ ಈಜುವುದು ಈಜುಕೊಳಗಳಲ್ಲಿ ಅಥವಾ ಯಮುನಾ ನದಿಯಲ್ಲಿ ಈಜಿದಂತೆ ಎಂದು ಭಾವಿಸಬಹುದು. ಭೋರ್ಗರೆಯುವ ನದಿಗಳಲ್ಲಿ ನಮ್ಮ ತಲೆ ಮೇಲಿರಬೇಕು, ಕೆಳಗಿರಬಾರದು ಮತ್ತು ಈಜು ಸ್ಪರ್ಧೆಯಲ್ಲಿ ಇರುವಂತೆ ದೇಹವು ನೇರವಾಗಿರದೆ ಹೆಚ್ಚು ನೆಟ್ಟಗಿರಬೇಕು. ನಾನು ಇಲ್ಲಿನ ಖಿಲಾಡಿ ಎಂದು ಬರೆದುಕೊಂಡಿದ್ದರು