ಈ ಕುರಿತು ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ರಿಜಿಜು, 20 ರಿಂದ 25 ಕಾಂಗ್ರೆಸ್ ಸಂಸದರು ಗೌರವಾನ್ವಿತ ಸ್ಪೀಕರ್ ಅವರ ಕೊಠಡಿಗೆ ಪ್ರವೇಶಿಸಿ, ಅವರನ್ನು ನಿಂದಿಸಿ, ಪ್ರಧಾನ ಮಂತ್ರಿಯವರಿಗೆ ಬೆದರಿಕೆ ಹಾಕಿದಾಗ ಕಾಂಗ್ರೆಸ್ ಸಂಸದರೊಬ್ಬರು ತೆಗೆದ ವೀಡಿಯೊ ಕ್ಲಿಪ್ ಇದು. ನಮ್ಮ ಪಕ್ಷವು ಚರ್ಚೆಯಲ್ಲಿ ನಂಬಿಕೆ ಇಡುತ್ತದೆ. ದೈಹಿಕವಾಗಿ ಬೆದರಿಕೆ ಹಾಕಲು ಸಂಸದರನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.