ಶ್ರೀರಾಮ ಕಾಲ್ಪನಿಕ ಎಂಬ ಹೇಳಿಕೆ: ಡಿ. 18ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಕೋರ್ಟ್ ಸೂಚನೆ | Rahul Gandhi
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on:
Copied
Follow Us
ವಾರಾಣಸಿ : ಶ್ರೀರಾಮ ಕಾಲ್ಪನಿಕ ಎಂಬ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಡಿ. 18ರಂದು ಖುದ್ದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ(Rahul Gandhi) ವಾರಾಣಸಿ ಕೋರ್ಟ್ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಈ ವರ್ಷದ ಮೇ 12ರಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಶ್ರೀರಾಮನನ್ನು "ಕಾಲ್ಪನಿಕ" ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಹಿಂದೂಗಳನ್ನು ಮತ್ತು ಸನಾತನ ಧರ್ಮದ ಸಂಕೇತಗಳನ್ನು ಪದೇ ಪದೇ ಅವಮಾನಿಸಿದೆ ಎಂಬ ಆರೋಪಿಸಿ ವಕೀಲ ಹರಿಶಂಕರ್ ಪಾಂಡೆ ವಾರಣಾಸಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ(ನ. 21) ಈ ಪ್ರಕರಣ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಯಜುರ್ವೇದ್ ವಿಕ್ರಮ್ ಸಿಂಗ್ ಅವರ ಪೀಠದ ಮುಂದೆ ಬಂದಿತ್ತು. ಆದರೆ ರಾಹುಲ್ ಗಾಂಧಿ ಅವರ ಗೈರು ಹಾಜರಿ ಹಿನ್ನೆಲೆ ಡಿ. 18ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ರಾಹುಲ್ ಗಾಂಧಿಯವರು ರಾಮನ ಅಸ್ತಿತ್ವವನ್ನು ಪ್ರಶ್ನಿಸಿ, ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಯುಪಿಎ ಸರ್ಕಾರ ರಾಮ ಮಂದಿರವನ್ನು ವಿರೋಧಿಸಿತ್ತು ಮತ್ತು ರಾಹುಲ್ ಗಾಂಧಿಯವರು ಈಗ ವಿದೇಶಗಳಲ್ಲಿ ರಾಮನ ಬಗ್ಗೆ ಅನುಮಾನಗಳನ್ನು ಎತ್ತುತ್ತಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ (ಏಜೆನ್ಸೀಸ್).