ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ಪದೇ ಪದೇ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದರೂ ಯಾರು ಏಕೆ ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ..?, ಮಿಸ್ಟರ್ ಮೋದಿ, ದೇಶವು ನಿಮ್ಮನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತಿದೆ, ಉತ್ತರಿಸಿ! ಪತ್ರಿಕೆ ಸೋರಿಕೆಗಳು ಪದೇ ಪದೇ ಏಕೆ ಸಂಭವಿಸುತ್ತಿವೆ?, ಈ ಪರೀಕ್ಷಾ ಪೇಪರ್ ಚರ್ಚೆಯ ಬಗ್ಗೆ ನೀವು ಪ್ರತಿ ಬಾರಿಯೂ ಏಕೆ ಮೌನವಾಗಿದ್ದೀರಿ? ನಿರಂತರವಾಗಿ ವಿಫಲರಾಗುತ್ತಿರುವ ಶಿಕ್ಷಣ ಸಚಿವರನ್ನು ನೀವು ಏಕೆ ವಜಾಗೊಳಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.