ಛತ್ತೀಸಗಡ : ಭದ್ರತಾ ಸಿಬ್ಬಂಧಿಗಳಿಗೆ ಶರಣಾದ ನಾಲ್ಕು ನಕ್ಸಲರು |Naxals
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಛತ್ತೀಸಗಡದ ರಾಯಪುರದಲ್ಲಿ ಶರಣಾದ ನಾಲ್ಕು ನಕ್ಸಲೀಯರು
ಶರಣಾದವರ ತಲೆಯ ಮೇಲೆ 23 ಲಕ್ಷ ಬಹುಮಾನ ಘೋಷಣೆಯಾಗಿತ್ತು
ಕಳೆದ ಎರಡು ವರ್ಷಗಳಲ್ಲಿ ಸುಮಾರು 2,380 ಕ್ಕೂ ಹೆಚ್ಚು ಮಾವೋವಾದಿಗಳು ಶರಣು
2026 ರ ಒಳಗೆ ಮಾವೋವಾದವನ್ನು ನಿರ್ಣಾಮ ಮಾಡುವ ಯೋಜನೆಯನ್ನು ರೂಪಿಸಿರುವ ಕೇಂದ್ರ ಸರ್ಕಾರ
ರಾಯಪುರ : ಕೇಂದ್ರ ಸರ್ಕಾರವು ಮಾರ್ಚ 2026 ರ ಒಳಗಾಗಿ ಭಾರತದಲ್ಲಿ ಮಾವೋವಾದವನ್ನು ಸಂಪೂರ್ಣವಾಗಿ ನಿರ್ಣಾಮ ಮಾಡುವ ಯೋಜನೆಯನ್ನು ರೂಪಿಸಿರುವ ಹಿನ್ನಲೆಯಲ್ಲಿ ಛತ್ತೀಸಗಡದ ರಾಯಪುರದಲ್ಲಿ ಬುಧವಾರ (ಡಿ.10) ದಂದು ನಾಲ್ಕು ನಕ್ಸಲೀಯರು ಭದ್ರತಾ ಸಿಬ್ಬಂದಿಯರ ಬಳಿ ಶರಣಾಗಿದ್ದಾರೆ.
ಶರಣಾದವರಲ್ಲಿ ಇಬ್ಬರು ಪುರಷರು ಮತ್ತು ಇಬ್ಬರು ಮಹಿಳೆಯರಿದ್ದು ಇವರನ್ನು ಹಿಡಿದುಕೊಟ್ಟವರಿಗೆ 23 ಲಕ್ಷ ಬಹುಮಾನವನ್ನು ಸಹ ಘೋಷಣೆ ಮಾಡಲಾಗಿತ್ತು. ಇವರುಗಳು ಪೂನಾ ಮಾರ್ಗೆಮ್ (ಪುನರ್ವಸತಿಯಿಂದ ಸಾಮಾಜಿಕ ಪುನರ್ಏಕೀಕರಣದವರೆಗೆ) ಉಪಕ್ರಮದಡಿಯಲ್ಲಿ ಹಿರಿಯ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳ ಮುಂದೆ ಶರಣಾದರು ಎಂದು ಕಾಂಕರ್‌ನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ಐ.ಕೆ.ಎಲೆಸೆಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶರಣಾದ ಮಾವೋವಾದಿಗಳಲ್ಲಿ ಕಾಜಲ್ ಅಲಿಯಾಸ್ ರಜಿತಾ ವೇದಾದ (19) ₹8 ಲಕ್ಷ ಬಹುಮಾನವನ್ನು ಹೊಂದಿದ್ದರೆ, ಇತರ ಮೂವರಾದ ಮಂಜುಳಾ ಅಲಿಯಾಸ್ ಲಕ್ಷ್ಮಿ ಪೊಟೈ (37), ವಿಲಾಸ್ ಅಲಿಯಾಸ್ ಚೈತು ಉಸೇಂಡಿ (42) ಮತ್ತು ರಾಮ್‌ಸಾಯಿ ಅಲಿಯಾಸ್ ಲಖನ್ ಮರ್ರಾಪಿ (42) ತಲಾ ₹5 ಲಕ್ಷ ಬಹುಮಾನವನ್ನು ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಸ್ತಾರ್ ವಿಭಾಗದ ತಾಂತ್ರಿಕ ತಂಡದ ಸದಸ್ಯ ಪೊಟೈ, 2006 ಮತ್ತು 2025 ರ ನಡುವೆ 16 ಮಾವೋವಾದಿ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದರು. ಇದರಲ್ಲಿ 2009 ರ ಮದನ್ವಾಡ-ಕೊರ್ಕೋಟಿ ಹೊಂಚುದಾಳಿಯೂ ಸೇರಿತ್ತು, ಇದರಲ್ಲಿ ಆಗಿನ ರಾಜನಂದಗಾಂವ್ ಎಸ್ಪಿ ವಿನೋದ್ ಚೌಬೆ ಮತ್ತು ಇತರ 28 ಸಿಬ್ಬಂದಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಪುನರ್ವಸತಿ ನೀತಿಯಡಿಯಲ್ಲಿ, ನಾಲ್ವರಿಗೂ ತಲಾ ₹50,000 ತಕ್ಷಣದ ಸಹಾಯವನ್ನು ನೀಡಲಾಯಿತು.ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಹಲವಾರು ಹಿರಿಯ ಕಾರ್ಯಕರ್ತರು ಸೇರಿದಂತೆ 2,380 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್‌ಗಢ ನಕ್ಸಲ್(Naxals) ಶರಣಾಗತಿ,ಪರಿಹಾರ ಮತ್ತು ಪುನರ್ವಸತಿ ನೀತಿ 2025 ರ ಅಡಿಯಲ್ಲಿ ಶರಣಾದ ಮಾವೋವಾದಿಗಳ ವಿರುದ್ಧದ ಪ್ರಕರಣಗಳ ಪರಿಶೀಲನೆ ಮತ್ತು ಹಿಂಪಡೆಯುವಿಕೆಗೆ ಸಂಬಂಧಿಸಿದ ಕಾರ್ಯವಿಧಾನವನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ. ಶರಣಾದ ಕಾರ್ಯಕರ್ತರ ಉತ್ತಮ ನಡವಳಿಕೆ ಮತ್ತು ಮಾವೋವಾದಿ ವಿರೋಧಿ ಪ್ರಯತ್ನಗಳಿಗೆ ಅವರ ಕೊಡುಗೆಯನ್ನು ಆಧರಿಸಿ ಪ್ರಕರಣ ಹಿಂಪಡೆಯುವಿಕೆಯನ್ನು ಪರಿಗಣಿಸಲು ಈ ನೀತಿಯು ಅನುಮತಿಸುತ್ತದೆ ಎಂದು ತಿಳಿಸಲಾಗಿದೆ.(ಏಜೆನ್ಸೀಸ್).