ಪಂದ್ಯದ ಮೊದಲ ಓವರ್ನಲ್ಲೇ ಯುವ ಪ್ರತಿಭೆ ಹರ್ಷಿತ್ ರಾಣಾ ಅಪಾಯಕಾರಿ ಬ್ಯಾಟರ್ ಡೆವೊನ್ ಕಾನ್ವೆಯನ್ನು ಪೆವಿಲಿಯನ್ಗೆ ಅಟ್ಟುವ ಮೂಲಕ ಶುಭಾರಂಭ ಮಾಡಿದರು. ಇದರ ಬೆನ್ನಲ್ಲೇ ರಚಿನ್ ರವೀಂದ್ರ ಒಂದು ಬೌಂಡರಿ ಬಾರಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದರಾದರೂ, ಮರು ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಟಿಮ್ ಸೀಫರ್ಟ್ ಅವರನ್ನು ಜಸ್ಪ್ರೀತ್ ಬುಮ್ರಾ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪವರ್ಪ್ಲೇ ಅವಧಿಯಲ್ಲೇ ನ್ಯೂಜಿಲೆಂಡ್ ಅನ್ನು 36/3 ರನ್ಗಳಿಗೆ ಕಟ್ಟಿಹಾಕಿದರು.