ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಅವರ ವಿರುದ್ಧ ಬಿಆರ್‌ಎಸ್ ಎಂಎಲ್‌ಸಿ ಟಿ. ಮಧುಸೂದನ್ (ತಾತಾ ಮಧು) ಅವರು ನಿಂದನೀಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಹಾಗೂ ದಲಿತ ಸಂಘಟನೆಗಳ ನಾಯಕರು ಕೆಸಿಆರ್ ಫಾರ್ಮ್‌ಹೌಸ್ ಬಳಿ ಮಂಗಳವಾರ ತಮಟೆ ಬಾರಿಸುವ ಪ್ರತಿಭಟನೆ ನಡೆಸಿದ್ದರು. ಆದರೆ, ಅವರು ಫಾರ್ಮ್‌ಹೌಸ್ ತಲುಪುವ ಮೊದಲೇ ಪೊಲೀಸರು ಅವರನ್ನು ತಡೆದಿದ್ದರು. ಈ ಪ್ರತಿಭಟನೆ ನಡೆದ ಮರುದಿನ, ಬಿಆರ್‌ಎಸ್ ಮಹಿಳಾ ಘಟಕದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ನಾಯಕರು ಚಲಿಸಿದ ರಸ್ತೆಯುದ್ದಕ್ಕೂ ಅರಿಶಿನ ನೀರು ಹಾಗೂ ಹಾಲನ್ನು ಸಿಂಪಡಿಸಿ ಶುದ್ಧೀಕರಣ ನಡೆಸಿದರು.