ಈ ಬಗ್ಗೆ ಮಾತನಾಡಿರುವ ಆಂಥೋನಿ ಅಲ್ಬನೀಸ್, ದಾಳಿಯು ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಗಳಿಂದ ಪ್ರೇರಿತವಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಅಲ್ಲದೆ, ಸ್ಥಳದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಇಸ್ಲಾಮಿಕ್ ಸ್ಟೇಟ್ ಧ್ವಜಗಳು ಕಂಡುಬಂದಿವೆ. ಇದು ಈ ಮೂಲಭೂತ ಮತ್ತು ವಿಕೃತ ಸಿದ್ಧಾಂತವನ್ನು ಸೂಚಿಸುತ್ತದೆ. ಇಸ್ಲಾಂ ಹೆಸರಿನಲ್ಲಿ ಹರಡುತ್ತಿರುವ ಈ ಹಿಂಸಾತ್ಮಕ ಸಿದ್ಧಾಂತವು ಗಂಭೀರ ಸಮಸ್ಯೆಯಾಗಿದ್ದು, ಇದನ್ನು ವಿಶ್ವಾದ್ಯಂತ ಗುರುತಿಸಲಾಗಿದೆ ಎಂದಿದ್ದಾರೆ. ಐಸಿಸ್ ಅತ್ಯಂತ ಅಪಾಯಕಾರಿ ಮತ್ತು ದುಷ್ಟ ಸಿದ್ಧಾಂತದಿಂದ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಇದನ್ನು ಆಸ್ಟ್ರೇಲಿಯಾ ಸರ್ಕಾರ ಮಾತ್ರವಲ್ಲದೆ ಜಾಗತಿಕವಾಗಿಯೂ ಖಂಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.