ಬಾಂಗ್ಲಾದಲ್ಲಿ ಬಿಎನ್‌ಪಿ ಸುನಾಮಿ.. 20 ವರ್ಷಗಳ ಬಳಿಕ ತಾರಿಕ್ ರೆಹಮಾನ್ ಅಧಿಕಾರಕ್ಕೆ..ಚುನಾವಣೆಯ ಪ್ರಮುಖ ಅಂಶಗಳು ಹೀಗಿವೆ! | Bangladesh Polls

Bangladesh Polls | ಬಾಂಗ್ಲಾದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ  ತಾರಿಕ್ ರೆಹಮಾನ್
Bangladesh Polls | ಬಾಂಗ್ಲಾದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಾರಿಕ್ ರೆಹಮಾನ್
Published on
ಢಾಕಾ: ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ಪದಚ್ಯುತಗೊಳಿಸಿ ವರ್ಷಗಳ ಬಳಿಕ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಚುನಾವಣೆಯಲ್ಲಿ (Bangladesh Polls) ಭರ್ಜರಿ ಗೆಲುವಿನತ್ತ ಸಾಗುತ್ತಿದೆ.

ಬಾಂಗ್ಲಾದೇಶ ಚುನಾವಣೆಯ ಪ್ರಮುಖ ಅಂಶಗಳು

  • ಮಧ್ಯಾಹ್ನ 12.20 ರ ಹೊತ್ತಿಗೆ, ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳು 208 ಸ್ಥಾನಗಳನ್ನು ಗೆದ್ದವು, ಜಮಾತ್-ಇ-ಇಸ್ಲಾಮಿ ಮತ್ತು ಅದರ ಮಿತ್ರಪಕ್ಷಗಳು 69 ಸ್ಥಾನಗಳನ್ನು ಗೆದ್ದವು ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ.
  • ತಾತ್ಕಾಲಿಕ ಫಲಿತಾಂಶಗಳ ಪ್ರಕಾರ, ತಾರಿಕ್ ರೆಹಮಾನ್ ಢಾಕಾ -17 ಮತ್ತು ಬೊಗುರಾ -6 ರಲ್ಲಿ ಸ್ಪರ್ಧಿಸಿದ ಎರಡೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
  • ಜಮಾತೆ-ಇ-ಇಸ್ಲಾಮಿ ಎರಡನೇ ಸ್ಥಾನದಲ್ಲಿದ್ದರೆ, ಇಸ್ಲಾಮಿಸ್ಟ್ ಪಕ್ಷದ ಮುಖ್ಯಸ್ಥ ಶಫೀಕರ್ ರೆಹಮಾನ್ ಢಾಕಾ -15 ಕ್ಷೇತ್ರದಿಂದ ಜಯಗಳಿಸಿದ್ದಾರೆ.
  • ತಾರಿಕ್ ರೆಹಮಾನ್ ಬಾಂಗ್ಲಾದೇಶದ ಪ್ರಧಾನಿಯಾಗುವುದು ಬಹುತೇಕ ಪಕ್ಕಾ ಆಗಿದ್ದು, 35 ವರ್ಷಗಳಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
  • 20 ವರ್ಷಗಳ ಬಳಿಕ ಬಿಎನ್‌ಪಿ ಅಧಿಕಾರಕ್ಕೆ ಮರಳಿದ್ದು, ಖಲೀದಾ ಜಿಯಾರ ಕೊನೆಯ ಅವಧಿ 2006 ರಲ್ಲಿ ಕೊನೆಗೊಂಡಿತ್ತು.
  • 2024 ರಲ್ಲಿ ಹಸೀನಾ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಜಮಾತ್ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ತಾನು ಸ್ಪರ್ಧಿಸಿದ 30 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
  • ಇಲ್ಲಿಯವರೆಗೆ ಸುಮಾರು ಏಳು ಮಹಿಳಾ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಪ್ರಥಮ್ ಅಲೋ ವರದಿ ಮಾಡಿದೆ. ಇವರಲ್ಲಿ ಬಿಎನ್‌ಪಿ ಅಭ್ಯರ್ಥಿಗಳಾದ ಮಾಣಿಕ್‌ಗಂಜ್ -3 ರಲ್ಲಿ ಅಫ್ರೋಜಾ ಖಾನಮ್ ರೀಟಾ, ಸಿಲ್ಹೆಟ್ -2 ರಲ್ಲಿ ತಹ್ಸಿನಾ ರಶ್ದಿರ್ ಲೂನಾ, ನಾಟೋರ್ -1 ರಲ್ಲಿ ಫರ್ಜಾನಾ ಶರ್ಮಿನ್, ಫರೀದ್‌ಪುರ -2 ರಲ್ಲಿ ಶಾಮಾ ಒಬೈದ್ ಇಸ್ಲಾಂ ಮತ್ತು ಫರೀದ್‌ಪುರ -3 ರಲ್ಲಿ ನಯಾಬ್ ಯೂಸುಫ್ ಅಹ್ಮದ್ ಸೇರಿದ್ದಾರೆ. BNP ಮೈತ್ರಿಕೂಟದ ಅಭ್ಯರ್ಥಿ ಇಸ್ರತ್ ಸುಲ್ತಾನಾ ಎಲೆನ್ ಭುಟ್ಟೊ ಜಲಕತಿ-2 ರಲ್ಲಿ ಜಯಗಳಿಸಿದರೆ, ಸ್ವತಂತ್ರ ಅಭ್ಯರ್ಥಿ ರುಮೀನ್ ಫರ್ಹಾನಾ ಬ್ರಾಹ್ಮಣಬಾರಿಯಾ-2 ರಲ್ಲಿ ಜಯಗಳಿಸಿದ್ದಾರೆ.
  • ಕಾನೂನು ಸಮಸ್ಯೆಗಳಿಂದಾಗಿ ಬಾಂಗ್ಲಾದೇಶದ ಚುನಾವಣಾ ಆಯೋಗವು ಮೂರು ಕ್ಷೇತ್ರಗಳ ಫಲಿತಾಂಶಗಳನ್ನು ಮುಂದೂಡಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
  • ಚಿತ್ತಗಾಂಗ್ -2 ರಿಂದ ಗೆದ್ದಿರುವ ಸರ್ವರ್ ಅಲಂಗೀರ್ ಮತ್ತು ಚಿತ್ತಗಾಂಗ್ -4 ರಿಂದ ಅಸ್ಲಂ ಚೌಧರಿ ವಿರುದ್ಧ ನ್ಯಾಯಾಲಯದಲ್ಲಿರುವ ಸಾಲ ಪ್ರಕರಣದಲ್ಲಿ ಮೇಲ್ಮನವಿ ಇತ್ಯರ್ಥವಾಗುವವರೆಗೆ ವಿಜೇತರೆಂದು ಘೋಷಿಸಲಾಗುವುದಿಲ್ಲ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ.
  • ಮೂರು ದಶಕಗಳಲ್ಲಿ ಮೊದಲ ಬಾರಿಗೆ ಅವಾಮಿ ಲೀಗ್‌ನ ದೋಣಿ ಚಿಹ್ನೆಯು ಮತಪತ್ರಗಳಲ್ಲಿ ಇರಲಿಲ್ಲ. 2024 ರ ಪ್ರತಿಭಟನೆಗಳ ಬಳಿಕ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅವಾಮಿ ಲೀಗ್‌ನ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಿತು ಮತ್ತು ನಂತರ ಚುನಾವಣಾ ಸಂಸ್ಥೆ ಅದರ ನೋಂದಣಿಯನ್ನು ಸ್ಥಗಿತಗೊಳಿಸಿತು. ತನ್ನ ಪದಚ್ಯುತಿಯ ಬಳಿಕ ದೆಹಲಿಗೆ ಪಲಾಯನ ಮಾಡಿದ ಹಸೀನಾ, ಚುನಾವಣೆಗಳನ್ನು ಕಾನೂನುಬಾಹಿರ ಎಂದು ಕರೆದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net