ಸಂಸತ್​​​ ಮೆಟ್ಟಿಲ ಮೇಲೆ ಕುಳಿತು ಚಹಾ ಕುಡಿದ ವಿಚಾರ; ರಾಹುಲ್ ಗಾಂಧಿಯನ್ನು ಟಪೋರಿ ಎಂದ ಬಿಜೆಪಿ ಸಂಸದೆ ಕಂಗನಾ ರನೌತ್ | Kangana Ranaut

ಸಂಸದೆ ಕಂಗನಾ ರನೌತ್ ಮತ್ತು ರಾಹುಲ್ ಗಾಂಧಿ
ಸಂಸದೆ ಕಂಗನಾ ರನೌತ್ ಮತ್ತು ರಾಹುಲ್ ಗಾಂಧಿ
Published on
ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಟಪೋರಿ ಎಂದು ಕರೆದಿರುವ ಬಿಜೆಪಿ ಸಂಸದೆ ಕಂಗನಾ ರನೌತ್(Kangana Ranaut), ಮಹಿಳಾ ಸಂಸದರು ಅವರಿಂದ ಅಹಿತಕರ ಅನುಭವವನ್ನು ಪಡೆಯುತ್ತಾರೆ ಎಂದು ಬುಧವಾರ(ಮಾ. 18) ಆರೋಪಿಸಿದ್ದಾರೆ.
ಇತ್ತೀಚಿಗೆ ಮಧ್ಯಪ್ರಾಚ್ಯದ ಸಂಘರ್ಷ ಮತ್ತು ದೇಶದಲ್ಲಿ ಎಲ್​ಪಿಜಿ ಅಭಾವದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಮಯದಲ್ಲಿ ಸಂಸತ್​ನ ಮೆಟ್ಟಿಳುಗಳ ಮೇಲೆ ಕುಳಿತು ಚಹಾ ಮತ್ತು ಬಿಸ್ಕತ್ ಸೇವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಡೆ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಕುರಿತು ಸುದ್ದಿ ಸಂಸ್ಥೆ IANS ಜೊತೆ ಮಾತನಾಡಿರುವ ಕಂಗನಾ, ನಮಗೆ ಮಹಿಳೆರಿಗೆ ರಾಹುಲ್ ಗಾಂಧಿಯವರನ್ನು ನೋಡಿದರೆ ಅಸಹಜತೆಯ ಭಾವನೆ ಉಂಟಾಗುತ್ತದೆ. ಹಾಗಾಗಿ ನಾವು ಮಾತನಾಡಲು ಇಷ್ಟಪಡಲ್ಲ. ಹೇ ನೀ ಅದನ್ನು ಮಾಡು ಎಂದು ಒರಟಾಗಿ ಹೇಳುತ್ತಾರೆ. ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯವರ ನಡವಳಿಕೆಯನ್ನು ನೋಡಬೇಕು. ಅವರು ಒಳ್ಳೆಯವರು ಎಂದು ಕಿಡಿಕಾರಿದ್ದಾರೆ.
ಇನ್ನೂ ರಾಹುಲ್ ಗಾಂಧಿಯವರು ಚಹಾ ಸೇವಿಸಿದ್ದನ್ನು ಖಂಡಿಸಿರುವ ಮಾಜಿ ಅಧಿಕಾರಿಗಳು, ಮತ್ತು ವಕೀಲರು ಸಾರ್ವಜನಿಕವಾಗಿ ಪತ್ರ ಬರೆದಿದ್ದು, ಸಂಸತ್ತಿನ ಮಕರ ದ್ವಾರ ಪ್ರವೇಶದ್ವಾರದಲ್ಲಿ ರಾಹುಲ್ ಗಾಂಧಿ ಚಹಾ ಮತ್ತು ಬಿಸ್ಕತ್ತು ಸೇವಿಸಿದ ಘಟನೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಮ್ಮು-ಕಾಶ್ಮೀರದ ಮಾಜಿ ಡಿಜಿಪಿ ಎಸ್​ಪಿ ವೈದ್ ಮಾತನಾಡಿದ್ದು, ಮಾರ್ಚ್ 14ರ ಘಟನೆ ತೀವ್ರ ಕಳವಳಕಾರಿ, ಸಂಸದೀಯ ಅಧಿಕಾರದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ರಾಹುಲ್ ಗಾಂಧಿಯವರ ನಡವಳಿಕೆಯು ವಿರೋಧ ಪಕ್ಷದ ನಾಯಕನ ನಡವಳಿಕೆಗೆ ತಕ್ಕುದಲ್ಲ. ಇದು ಅಧಿಕಾರ ಮತ್ತು ದುರಹಂಕಾರವನ್ನು ತೋರಿಸುತ್ತದೆ ಎಂದಿದ್ದಾರೆ.
ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಸಹ ಈ ಕುರಿತು ಕಾಂಗ್ರೆಸ್ ಸಂಸದೀಯ ಸಮಿತಿ ಅಧ್ಯಕ್ಷ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದು, ಘಟನೆಯನ್ನು ಖಂಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net