ಅಂಬರನಾಥ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ದೋಸ್ತಿ: ಸ್ಥಳೀಯ ನಾಯಕರ ವಿರುದ್ಧ ಸಿಎಂ ದೇವೇಂದ್ರ ಫಡ್ನವೀಸ್ ಗರಂ | Devendra Fadnavis

ಅಂಬರನಾಥ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ದೋಸ್ತಿ: ಸ್ಥಳೀಯ ನಾಯಕರ ವಿರುದ್ಧ ಸಿಎಂ ದೇವೇಂದ್ರ ಫಡ್ನವಿಸ್ ಗರಂ
ಅಂಬರನಾಥ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ದೋಸ್ತಿ: ಸ್ಥಳೀಯ ನಾಯಕರ ವಿರುದ್ಧ ಸಿಎಂ ದೇವೇಂದ್ರ ಫಡ್ನವಿಸ್ ಗರಂ
Published on
ಮುಂಬೈ: ಮಹಾರಾಷ್ಟ್ರದಲ್ಲಿ ಬೆರಗುಗೊಳಿಸುವ ರಾಜಕೀಯ ಬೆಳವಣಿಗೆಯಾಗಿದ್ದು, ಅಂಬರ್‌ನಾಥ್‌ನಲ್ಲಿ ಸ್ಥಳೀಯ ಚುನಾವಣೆಯ ನಂತರ ಕಾಂಗ್ರೆಸ್​ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis), ಕಾಂಗ್ರೆಸ್ ಜೊತೆಗಿನ ಯಾವುದೇ ಮೈತ್ರಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಅಜಿತ್ ಪವಾರ್ ನೇತೃತ್ವದ NCP ಜೊತೆ ಸೇರಿ ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಈ ನೆಡೆಯು ರಾಜ್ಯ ಮಟ್ಟದ ಮಿತ್ರ ಪಕ್ಷವಾದ ಏಕನಾಥ್ ಶಿಂಧೆಯ ಶಿವಸೇನೆಯನ್ನು ಬದಿಗಿಟ್ಟರು ಎಂಬ ವರದಿಗಳ ನಂತರ ಜನವರಿ 7ರಂದು ವಿವಾದ ಭುಗಿಲೆದ್ದಿತು.
 ಈ ಬಗ್ಗೆ ಮಾತನಾಡಿರುವ ಮಹಾ ಸಿಎಂ ಫಡ್ನವೀಸ್, ರಾಜ್ಯ ನಾಯಕತ್ವವು ಈ ಕ್ರಮಕ್ಕೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ಎಂದಿಗೂ ಕಾಂಗ್ರೆಸ್ ಅಥವಾ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಮೈತ್ರಿಗಳು ಸ್ವೀಕಾರಾರ್ಹವಲ್ಲ ಮತ್ತು ಸಹಿಸುವುದಿಲ್ಲ. ಸ್ಥಳೀಯ ನಾಯಕರು ಅನುಮೋದನೆಯಿಲ್ಲದೆ ಈ ವ್ಯವಸ್ಥೆಗಳಿಗೆ ಪ್ರವೇಶಿಸಿದ್ದರೆ. ಇದು ಶಿಸ್ತಿನ ಗಂಭೀರ ಉಲ್ಲಂಘನೆಯಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಮಹಾ ಸಿಎಂ, ಬಿಜೆಪಿಯ ರಾಷ್ಟ್ರೀಯ ಸಿದ್ಧಾಂತವು ಕಾಂಗ್ರೆಸ್ ಮುಕ್ತ ಭಾರತ ಮೇಲೆ ಕೇಂದ್ರೀಕೃತವಾಗಿದೆ. ನಾವು ಅಧಿಕಾರಕ್ಕಾಗಿ ಯಾವುದೇ ಕಾರಣಕ್ಕೂ ಸ್ಥಳೀಯ ಪಕ್ಷದ ತತ್ವಗಳನ್ನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಅಂಬರ್ನಾಥ್ ವಿಕಾಸ್ ಅಘಾಡಿ ಪವರ್ ಮೂವ್

ಶಿವಸೇನೆ ಮತ್ತು ಬಿಜೆಪಿ ರಾಜ್ಯದ ಮಹಾಯುತಿ ಸರ್ಕಾರದಲ್ಲಿ ಪಾಲುದಾರರಾಗಿದ್ದರೂ, 2025ರ ಡಿಸೆಂಬರ್ 20 ರಂದು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು. ಫಲಿತಾಂಶಗಳು 60 ಸದಸ್ಯರ ಮಂಡಳಿಯಲ್ಲಿ ಅತಂತ್ರವನ್ನು ಸೃಷ್ಟಿಸಿದೆ. 
ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ 27 ಸ್ಥಾನ, ಬಿಜೆಪಿ, 14, ಕಾಂಗ್ರೆಸ್​ 12, ಎನ್​ಸಿಪಿ 4 ಮತ್ತು ಇತರೆ 2 ಸ್ಥಾನಗಳಲ್ಲಿ ಜನಗಳಿಸಿವೆ. 
ಬಹುಮತದ ಅಂತರವನ್ನು (31 ಸ್ಥಾನಗಳು) ಕಡಿಮೆ ಮಾಡಲು, ಸ್ಥಳೀಯ ಬಿಜೆಪಿ ಘಟಕವು ಅಂಬರ್ನಾಥ್ ವಿಕಾಸ್ ಅಘಾಡಿ ರಚನೆಗೆ ಮುಂದಾಯಿತು. ಈ ಅಪರೂಪದ ಒಕ್ಕೂಟವು 14 ಬಿಜೆಪಿ ಕಾರ್ಪೊರೇಟರ್‌ಗಳು, 12 ಕಾಂಗ್ರೆಸ್ ಮತ್ತು 4 ಅಜಿತ್ ಪವಾರ್ ಬಣವನ್ನು ಒಳಗೊಂಡಿದ್ದು, ಒಟ್ಟು 31 ಮತಗಳನ್ನು ಗಳಿಸಿದೆ. ಅಲ್ಲದೆ, ಶಿಂಧೆ ನೇತೃತ್ವದ ಶಿವಸೇನೆಯನ್ನು ಅಧಿಕಾರದಿಂದ ದೂರವಿಡಲು ಈ ಪ್ಲಾನ್​ ಮಾಡಲಾಗಿದೆ.

ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ 

ಈ ಮೈತ್ರಿಯ ವಿರುದ್ಧ ಕೆಂಡಕಾರಿರುವ ಶಿವಸೇನೆಯ ಬಾಲಾಜಿ ಕಿನಿಕರ್, ಈ ಒಪ್ಪಂದವನ್ನು ಅನೈತಿಕ ಮತ್ತು ಅವಕಾಶವಾದಿ ಎಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುವಾಗ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಅನ್ನು ಹೇಗೆ ಬಲಪಡಿಸಬಹುದು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ನೆಡೆಯನ್ನು ಬಿಜೆಪಿಯ ದ್ವಿಮುಖ ನೀತಿ ಎಂದು ಕರೆದ ಸಂಜಯ್ ರಾವತ್, ಬಿಜೆಪಿಯು ಎಂವಿಎಯನ್ನು ಅಪವಿತ್ರ ಎಂದು ಟೀಕಿಸಿದರು. ಅದರೆ ಅವರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಪೂರೈಸಲು ಅಂಬರ್ನಾಥ್‌ನಲ್ಲಿಯೂ ಅದೇ ರೀತಿ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದರೆ, ಈ ಗುಂಪಿನ ನಾಯಕ ಅಭಿಜಿತ್ ಕಾರಂಜುಲೆ ಪಾಟೀಲ್ ಈ ಕ್ರಮವನ್ನು ಸಮರ್ಥಿಸಿಕೊಂಡರು. ಹಿಂದಿನ ಸೇನಾ ಆಡಳಿತದಲ್ಲಿ ಪುರಸಭೆಯ ಆಡಳಿತವನ್ನು ಭಯ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಮೈತ್ರಿ ಅಗತ್ಯವಾಗಿತ್ತು ಎಂದು ಪ್ರತಿಪಾದಿಸಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net