ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ ಎಂದು ಹೇಳಿದರು. ಅಲ್ಲದೆ, ಚುನಾವಣಾ ಆಯೋಗದ ಫಾರ್ಮ್‌ಗಳು ಭರ್ತಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈಗ ಅವರು, ಫಾರ್ಮ್‌ಗಳನ್ನು ಭರ್ತಿ ಮಾಡಿ, ನಿಮ್ಮ ತಂದೆಯ ಜನನ ಪ್ರಮಾಣಪತ್ರ, ನಿಮ್ಮ ಅಜ್ಜನ ಜನನ ಪ್ರಮಾಣಪತ್ರವನ್ನು ತನ್ನಿ ಎಂದು ಹೇಳುತ್ತಿದ್ದಾರೆ. ಮೆಟ್ರಿಕ್ಯುಲೇಷನ್ ಪಾಸಾಗದವರಿಗೆ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಎಲ್ಲಿಂದ ಸಿಗುತ್ತದೆ? ಎಂದು ಆಯೋಗವನ್ನು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).