ಬಿಹಾರ ವಿಧಾನಸಭೆ; ಇಂಡಿಯಾ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ತೇಜಸ್ವಿ ಯಾದವ್ ಆಯ್ಕೆ | Tejashwi Yadav

ಆರ್​ಜೆಡಿ ನಾಯಕ ತೇಜಸ್ವಿ ಯಾದವ್
ಆರ್​ಜೆಡಿ ನಾಯಕ ತೇಜಸ್ವಿ ಯಾದವ್
Published on
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಸೋತ ಬಳಿಕ ಇಂದು(ನ. 29) ಪಾಟ್ನಾದಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆದಿದ್ದು, ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನಾಗಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್(Tejashwi Yadav) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಸಮೀರ್ ಕುಮಾರ್ ಸಿಂಗ್, ಬಿಹಾರ ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ನಾಯಕರು ನಿಲುವು ಮತ್ತು ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲಾ ಪಕ್ಷಗಳು ಸಮನ್ವಯದಿಂದ ಕೆಲಸ ಮಾಡಲು ಒಪ್ಪಿಕೊಂಡಿವೆ. ಮಹಾಮೈತ್ರಿಕೂಟವು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ಚುನಾವಣೆ ಮುನ್ನ ಹಲವು ಸಮೀಕ್ಷೆಗಳಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಹೆಚ್ಚಿನ ಜನ ತೇಜಸ್ವಿ ಯಾದವ್​ಗೆ ಬೆಂಬಲಿಸಿದ್ದರು. ನಿತೀಶ್ ಕುಮಾರ್​ಗೆ ಕಡಿಮೆ ಬೆಂಬಲ ಇತ್ತು. ಆದಾಗ್ಯೂ, ಚುನಾವಣಾ ಆಯೋಗ ಮತ್ತು ಆಡಳಿತದ ನಿರ್ವಹಣೆಯ ಮೂಲಕ ಫಲಿತಾಂಶಗಳನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಭರವಸೆ ಕಳೆದುಕೊಳ್ಳಬಾರದು ಮತ್ತು ಒಗ್ಗಟ್ಟಿನಿಂದ ಇರಬೇಕು. ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ಶಾಸಕರು ಓಡಿಹೋಗುತ್ತಿಲ್ಲ ಮತ್ತು ಮಹಾಮೈತ್ರಿಕೂಟವು ಸಂಪೂರ್ಣವಾಗಿ ಅಖಂಡವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಡಿ. 1ರಂದು ಶಾಸಕರ ಪ್ರಮಾಣವಚನ ಸ್ವೀಕಾರ, ಡಿಸೆಂಬರ್ 2 ರಂದು ಸ್ಪೀಕರ್ ಆಯ್ಕೆ ನಡೆಯಲಿದ್ದು, ಬಳಿಕ ರಾಜ್ಯಪಾಲರ ಭಾಷಣ ಮತ್ತು ವಿನಿಯೋಗ ಮಸೂದೆಯ ಮಂಡನೆ ಆಗಲಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net