ಬಿಡದಿ ಟೌನ್​​ಶಿಪ್ ಕದನ; ಬೈರಮಂಗಲ ಅಲ್ಲ, ವಿಧಾನಸೌಧಕ್ಕೆ ಬನ್ನಿ: ಕುಮಾರಸ್ವಾಮಿಗೆ ಡಿಕೆಶಿ ಪಂಥಾಹ್ವಾನ!

Bidadi
Bidadi
Published on
ಬೆಂಗಳೂರು: ರಾಜ್ಯದಲ್ಲಿ ಭಾರಿ ವಿವಾದಕ್ಕೆ ಸೃಷ್ಟಿಸಿರುವ ಬಿಡದಿ ಟೌನ್​ಶಿಪ್ ವಿಚಾರವಾಗಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ, ಜೆಡಿಎಸ್​ ಮತ್ತು ಸ್ಥಳೀಯ ರೈತರು ಬೃಹತ್​ ಪ್ರತಿಭಟನೆ ಕೈಗೊಂಡಿದ್ದು, ಈ ಯೋಜನೆಯನ್ನು ಇಲ್ಲಿಗೆ ಕೈಬಿಡುವಂತೆ ಎಚ್​ಡಿಕೆ ಸರ್ಕಾರಕ್ಕೆ ಎಚ್ಚರಿಸಿದರು. ಜೊತೆಗೆ ನೇರ ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಹಾಕಿದರು. ಈ ಕುರಿತು ಕಡೆಗೂ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ನೇರ ಚರ್ಚೆಗೆ ಪತ್ರದ ಮೂಲಕ ಅಸ್ತು ಎಂದಿದ್ದಾರೆ.​    ​ 

ಎಚ್​ಡಿಕೆ ಸವಾಲಿಗೆ ಸಿಎಂ ಅಸ್ತು!

ಆರಂಭದಲ್ಲಿ ಬಿಡದಿ ಟೌನ್​ಶಿಪ್ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಪರವಾಗಿ ಜೆಡಿಎಸ್​ನವರು ಅಧಿವೇಶನದಲ್ಲಿ ಚರ್ಚೆ ಮಾಡಲಿ, ಉತ್ತರ ಕೊಡೋಣ ಎಂದ ಡಿಕೆಶಿ, ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಹಿಂದೆಯೇ ಚರ್ಚೆಗೆ ಕರೆದಿದ್ದೆ. ಅದರೆ ಬರಲಿಲ್ಲ. ಮುಂದಿನ ಅಧಿವೇಶನದಲ್ಲಿ ಅವರ ಪಕ್ಷದ, ಇತರ ಅನುಭವಿ ರಾಜಕಾರಣಿಗಳ ಮೂಲಕ ಚರ್ಚೆ ಮಾಡಿಸಲಿ ಎಂದು ಹೇಳಿದ್ದರು.

ಲಿಖಿತ ರೂಪದಲ್ಲಿ ಚರ್ಚೆಗೆ ಆಹ್ವಾನ

ಪತ್ರದಲ್ಲಿ ಎಚ್​ಡಿಕೆಗೆ ಸವಾಲಿಗೆ ಉತ್ತರಿಸಿರುವ ಸಿಎಂ, ನೀವು ಪ್ರಾರಂಭಿಸಿರುವ ಬಿಡದಿ ಟೌನ್​ಶಿಪ್​ ಯೋಜೆನೆ ಸಂಬಂಧಿಸಿದಂತೆ ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದೇನೆ. ಇದೇ ಜೂ.26ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌದಕ್ಕೆ ನೀವು ಮತ್ತು ನಿಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸಿ ಎಂದು ತಿಳಿಸಿದ್ದಾರೆ.  

ಎಚ್​ಡಿಕೆ ಗಂಭೀರ ಆರೋಪ 

ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಬಿಡದಿ ಟೌನ್‌ಶಿಪ್ ಯೋಜನೆ ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ದಂಧೆಕೋರರು ಮತ್ತು ‘ಭೂಗಳ್ಳರ ಹಿತಾಸಕ್ತಿಗಾಗಿ ರೂಪಿತವಾಗಿದೆಯೇ ಹೊರತು, ಇದರಿಂದ ನಾಡಿಗೆ ಅಥವಾ ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ಪ್ರಯೋಜನವಿಲ್ಲ. ಕಳೆದ 20 ವರ್ಷಗಳಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಅವರು ಯೋಚಿಸಬೇಕು. ಯಾವುದೇ ಹೊಸ ಯೋಜನೆ ತರುವ ಮುನ್ನ ಅಲ್ಲಿನ ರೈತರ ಪರಿಸ್ಥಿತಿಯ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಬೆಂಗಳೂರು ಸುತ್ತಮುತ್ತ ಈ ಹಿಂದೆ ಅರ್ಕವತಿ ಬಡಾವಣೆಗಾಗಿ 3 ಸಾವಿರ ಎಕರೆಗೆ ಅಧಿಸೂಚನೆ ಹೊರಡಿಸಿ, ನಂತರ ನಿಯಮಬಾಹಿರವಾಗಿ 1 ಸಾವಿರ ಎಕರೆಯನ್ನು ಕೈಬಿಟ್ಟ ಇತಿಹಾಸ ಇವರ ಕಣ್ಣಮುಂದೆಯೇ ಇದೆ ಎಂದು ಡಿಕೆಶಿ ವಿರುದ್ಧ ಗುಡುಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net