ಬಿಜೆಪಿ ಸೇರುವುದಕ್ಕಿಂತ ಜೈಲೇ ಲೇಸು: ಇಡಿ ಬಲೆಗೆ ಬಿದ್ದ ಸಂಜೀವ್ ಅರೋರಾ ಪರ ಕೇಜ್ರಿವಾಲ್ ಬ್ಯಾಟಿಂಗ್; ಕೇಂದ್ರದ ವಿರುದ್ಧ ಎಎಪಿ ಗರಂ! Arvind Kejriwal on Central Government
ಬಿಜೆಪಿ ಸೇರುವ ಬದಲು ಜೈಲು ಸೇರುವುದೇ ಲೇಸೆಂದ ಅರವಿಂದ್ ಕೇಜ್ರಿವಾಲ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಎಪಿ ನಾಯಕ ಸಂಜೀವ್ ಅರೋರಾ ಇಡಿ ಬಲೆಗೆ
ಬಿಜೆಪಿ ಸೇರುವ ಬದಲು ಜೈಲು ಸೇರುವುದೇ ಲೇಸೆಂದ ಅರವಿಂದ್ ಕೇಜ್ರಿವಾಲ್
ಅಸ್ಸಾಂ, ಬಂಗಾಳದ ಬಳಿಕ ಪಂಜಾಬ್ ಮುಂದಿನ ಟಾರ್ಗೆಟ್ ಎಂದ ಭಗವಂತ್ ಮಾನ್
ನವದೆಹಲಿ: ಸುಮಾರು 100 ಕೋಟಿ ನಕಲಿ ಜಿಎಸ್ಟಿ ಬಿಲ್ಲಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜೀವ್ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಈಗ ಈ ಬಂಧನವನ್ನು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal on Central Government) ವಿರೋಧಿಸಿದ್ದಾರೆ.
ತಮ್ಮ ಪಕ್ಷದ ನಾಯಕ ಸಂಜೀವ್ ಅರೋರಾ ಅವರ ಬಂಧನದ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಒಬ್ಬ ವ್ಯಕ್ತಿಯ ಚಾರಿತ್ರ್ಯವು ಆತನ ಕಷ್ಟದ ಸಮಯದಲ್ಲಿ ತಿಳಿದುಬರುತ್ತದೆ. ಸಂಜೀವ್ ಅರೋರಾ ಬಿಜೆಪಿ ಸೇರುವುದಕ್ಕಿಂತ ಜೈಲಿಗೆ ಹೋಗುವುದನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನನ್ನದೊಂದು ಸಲಾಂ, ಎಂದು ಎಕ್ಸ್(ಟ್ವಿಟರ್) ನಲ್ಲಿ ಬರೆದು ಕೊಂಡಿದ್ದಾರೆ.
ಇತರೆ ಪಕ್ಷಗಳನ್ನು ಹೆದರಿಸುವುದೇ ತನಿಖಾ ಸಂಸ್ಥೆಗಳ ಕೆಲಸ
ಸಂಜೀವ್ ಅರೋರಾ ಅವರ ಬಂಧನವಾಗುತ್ತಿದ್ದಂತೆ ಪತ್ರಿಕಾಗೋಷ್ಟಿ ನಡೆಸಿದ ಅರವಿಂದ್ ಕೇಜ್ರಿವಾಲ್, ನಮ್ಮ ದೇಶದ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ.
ಆಡಳಿತ ಪಕ್ಷವನ್ನು ಪ್ರಶ್ನಿಸುವ ಪಕ್ಷದ ಹಾಗೂ ನಾಯಕರನ್ನು ಹೆದರಿಸುವುದು, ದಾಳಿ ನಡೆಸುವುದೇ ಇವರ ಕೆಲಸವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಈ ಮೂಲಕ ಇತರೆ ಪಕ್ಷದಲ್ಲಿರುವವರನ್ನು ಬಿಜೆಪಿಗೆ ಸೇರಿಸುವುದೇ ಇವರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಸಂಜೀವ್ ಅರೋರಾ ಅವರ ಬಂಧನವನ್ನು ವಿರೋಧಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪಶ್ಚಿಮ ಬಂಗಾಳ, ಅಸ್ಸಾಂ ಬಳಿಕ ಬಿಜೆಪಿಯ ಮುಂದಿನ ಟಾರ್ಗೆಟ್ ಪಂಜಾಬ್ ಆಗಿದೆ. ಅದಕ್ಕಾಗಿ ನಮ್ಮ ಪಕ್ಷದ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ, (ಏಜನ್ಸೀಸ್).