ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಎಲ್ಲರೂ ಸೌಲಭ್ಯಗಳನ್ನು ಅನುಭವಿಸುವುದರಲ್ಲೇ ನಿರತರಾಗಿದ್ದಾರೆ. ತಮ್ಮ ಸ್ವಂತ ಹೊಟ್ಟೆ ತುಂಬಿದರೆ ಸಾಕು, ಪಕ್ಷ ಹಾಳಾಗಿ ಹೋದರೂ ಪರವಾಗಿಲ್ಲ ಎಂದು ಸಾಖಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅಂತಹ ನಾಯಕರ ಬದ್ಧತೆಯನ್ನು ಪ್ರಶ್ನಿಸಿರುವ ಅವರು, ಅವರು ಮೊದಲು ಹೇಗಿದ್ದರು, ಈಗ ಏನಾಗಿದ್ದಾರೆ..? ಎಂದು ಕುಟುಕಿದ್ದಾರೆ. ವ್ಯಕ್ತಿಗತ ನಾಯಕರಗಿಂತ ಪಕ್ಷಕ್ಕೆ ಮೊದಲ ಆದ್ಯತೆ ನೀಡುವಂತೆ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿರುವ ಶಾಖಾ, ಯಾವೊಬ್ಬ ನಾಯಕನ ಅನುಯಾಯಿಗಳಾಗುವ ಬದಲು, ಪಕ್ಷದ ಅನುಯಾಯಿಗಳಾಗಿ. ನಾಯಕರು ಬರುತ್ತಾರೆ ಹೋಗುತ್ತಾರೆ, ಆದರೆ ಪಕ್ಷ ಉಳಿಯುತ್ತದೆ ಎಂದು ಅವರು ಬರೆದಿದ್ದಾರೆ.