ನವರತನ್ ಅಂಡ್ ಸನ್ಸ್ ವ್ಯವಸ್ಥಾಪಕ ನಿರ್ದೇಶಕ ನಿರ್ಮಲ್ ಕುಮಾರ್ ಬಾಫನಾ ಮಾತನಾಡಿ, ಮಳಿಗೆಯಲ್ಲಿ ಸಾವಿರಕ್ಕೂ ಅಧಿಕ ವಿನ್ಯಾಸದಿಂದ ತಯಾರಿಸಲಾಗಿರುವ ಚಿನ್ನಾಭರಣಗಳನ್ನು ಸಂಗ್ರಹಿಸಲಾಗಿದೆ. ಜುಮುಕಿ, ಕಿವಿಯೋಲೆ, ಡ್ರಾಪ್ಸ್, ಉಂಗುರ, ನೆಕ್ಲೇಸ್, ಕಿವಿಯೋಲೆ, ಬಳೆ, ತೋಳಬಂದಿ, ಡಾಬು, ವಿಕ್ಟೋರಿಯನ್ ಕಲೆಕ್ಷನ್ಸ್, ಆ್ಯಂಟಿಕ್ ಕಲೆಕ್ಷನ್ಸ್, ಪೋಲ್ಕಿ ಮತ್ತು ವಜ್ರದ ವಿವಿಧ ವಿನ್ಯಾಸದ ಬಳೆಗಳಿವೆ. ಪುರುಷರು, ಮಹಿಳೆಯರು ಧರಿಸಬಹುದಾದ ವೈಟ್‌ಗೋಲ್ಡ್, ಮಹಿಳೆಯರಿಗೆ ಒಪ್ಪುವ ರೋಸ್‌ಗೋಲ್ಡ್, ಇಟಾಲಿಯನ್ ಸೆಟ್, ಹೊಸ ಶೈಲಿಯ ವಜ್ರದ ನೆಕ್ಲೆಸ್, ಹಾರ, ಚಾನ್‌ಬಾಲಿ, ಲೈಟ್‌ವೇಟ್ ಚೋಕರ್ಸ್, ಪ್ಯೂಷನ್, ಟ್ರೆಡಿಷನಲ್, ಸಾಲಿಟರ್ಸ್, ಬ್ರೈಡಲ್ ಸೆಟ್ಸ್ ವಜ್ರಾಭರಣಗಳಿವೆ ಎಂದರು.