

NASA: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ನಾಸಾ ಗಗನಯಾತ್ರಿ ಜೆಸ್ಸಿಕಾ ಮೇಯರ್ ಹಾಗೂ ಅವರ ತಂಡದ ಸದಸ್ಯರು ವಿಶೇಷ ಪ್ರಯೋಗವೊಂದರಲ್ಲಿ ನಿರತರಾಗಿದ್ದಾರೆ. 'ಎಕ್ಸ್‌ಪೆಡಿಷನ್ 75' ಯೋಜನೆಯ ಭಾಗವಾಗಿ ರೆಡ್ ರಷ್ಯನ್ ಕೇಲ್ ಮತ್ತು ವಾಸಾಬಿ ಸಾಸಿವೆ ಸಸ್ಯಗಳನ್ನು ಬೆಳೆಸಲಾಗುತ್ತಿದ್ದು, ಗಗನಯಾತ್ರಿ ಮೇಯರ್ ಇವುಗಳನ್ನು ತಮಾಷೆಯಾಗಿ "ನಮ್ಮ ತಂಡದ ಹೊಸ ಸದಸ್ಯರು" ಎಂದು ಬಣ್ಣಿಸಿದ್ದಾರೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಗಿಡಗಳು ಬೆಳೆಯುತ್ತಿರುವ ಈ ವಿಶಿಷ್ಟ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಅತ್ಯಂತ ರೋಚಕ ಮತ್ತು ಸೌಂದರ್ಯಯುತ ಪ್ರಯೋಗವೆಂದು ಹರ್ಷ ವ್ಯಕ್ತಪಡಿಸಿದ್ದಾರೆ (
).