ಅಜ್ಜ-ಅಜ್ಜಿಯ ಕನಸಿಗೆ ರೆಕ್ಕೆ ಕಟ್ಟಿದ ಮೊಮ್ಮಗ: ವೈರಲ್​ ಆಯ್ತು ದುಬೈ ಪ್ರವಾಸದ ಎಮೋಷನಲ್ ವಿಡಿಯೋ ! Grandparents

Grandparents (ಸಾಂದರ್ಭಿಕ ಚಿತ್ರ)
Grandparents (ಸಾಂದರ್ಭಿಕ ಚಿತ್ರ)
Published on
ಹರಿಯಾಣ: ಜಗತ್ತು ಮುಂದುವರೆಯುತ್ತಿದ್ದಂತೆಯೇ ಹಿರಿಯರ (Grandparents) ಮೇಲಿರುವ ಗೌರವಗಳು ಕಡಿಮೆಯಾಗುತ್ತಿವೆ ಎಂಬ ಮಾತು ಆಗ್ಗಾಗ ಕೇಳಿಬರುತ್ತಿರುತ್ತವೆ. ಆದರೆ, ಇವೆಲ್ಲವುಗಳ ನಡುವೆ ಹರಿಯಾಣ ಮೂಲದ ಯುವಕನೊಬ್ಬ ತನ್ನ ಅಜ್ಜ-ಅಜ್ಜಿಯ ಕನಸನ್ನು ನನಸು ಮಾಡುವ ಸಲುವಾಗಿ ಅವರನ್ನು ವಿಮಾನದಲ್ಲಿ ಪ್ರವಾಸ ಕರೆದುಕೊಂಡು ಹೋಗಿರುವ ಘಟನೆ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಕನಸಿಗೆ ರೆಕ್ಕೆ ಕಟ್ಟಿದ ಮೊಮ್ಮಗ

ಹರಿಯಾಣ ಮೂಲದ ಯುವಕ ಅಂಕಿತ್​ ತನ್ನ ಅಜ್ಜ ಅಜ್ಜಿಯ ಬಹುಕಾಲದ ಆಸೆಯನ್ನು ಪೂರೈಸಲು ಸಿದ್ಧವಾಗಿದ್ದನು. ವಯಸ್ಸಿನಿಂದ ಮುಪ್ಪಾಗುವರೆಗೂ ತಮ್ಮ ಜೀವನವನ್ನು  ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಈ ಹಿರಿಯ ಜೀವಿಗಳಿಗೆ ವಿಮಾನದಲ್ಲಿ ಹಾರುವುದು ಒಂದು ಸುಂದರ ಕನಸಾಗಿತ್ತು. ಆ ಕನಸಿಗೆ ಮೊಮ್ಮಗ ಈಗ ರೆಕ್ಕೆ ಕಟ್ಟಿದ್ದು, ವಿಮಾನ ಪ್ರಯಾಣ ಮಾತ್ರವಲ್ಲದೇ, ಅವರನ್ನು ಅಂತರಾಷ್ಟ್ರೀಯ ಪ್ರವಾಸದ ಭಾಗವಾಗಿ ದುಬೈಗೆ ಕರೆದುಕೊಂಡು ಹೋಗಿದ್ದಾರೆ.

ವಿಡಿಯೋದಲ್ಲಿ ಸೆರೆಯಾಯ್ತು ಭಾವುಕ ಕ್ಷಣಗಳು

ಅಂಕಿತ್ ಅವರು ಈ ಸುಂದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಅಜ್ಜ-ಅಜ್ಜಿಯ ಮೊದಲ ವಿಮಾನ ಪ್ರಯಾಣ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೇಳೆ ಹಿರಿಯ ದಂಪತಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವಾಗ ಅವರಲ್ಲಿದ್ದ ಭಯ, ಸೀಟಿನಲ್ಲಿ ಕುಳಿತಾಗ ಮುಖದಲ್ಲಿ ಕಂಡಂತಹ ಮುಗ್ಧ ನಗು, ಅವರಿಬ್ಬರು ಗಾಬರಿಯಾದಾಗ ಮೊಮ್ಮಗ ಕೈ  ಹಿಡಿದು ಸಾಂತ್ವಾನ ಮಾಡುತ್ತಿರುವ ದೃಶ್ಯ ಎಲ್ಲರಿಗೂ ಮನಮಿಡಿಯುವಂತಿತ್ತು.
ದುಬೈನ ಬುರ್ಜ್ ಖಲೀಫಾ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳನ್ನು ಅವರು ತಮ್ಮ ಸಾಂಪ್ರದಾಯಕ ಉಡುಗೆಗಳಾದ ಧೋತಿ ಮತ್ತು ಘಾಗ್ರಾ ಧರಿಸಿ ನೋಡಿ ಸಂತೋಷ ಪಡುತ್ತಿದ್ದು, ಇದು ಅವರ ಸಂಭ್ರಮಕ್ಕೆ ಇನ್ನಷ್ಟು ಬೆರಗು ಮೂಡಿಸಿತು.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಪ್ರತಿಯೊಬ್ಬ ಮೊಮ್ಮಗನೂ ತನ್ನ ಹಿರಿಯರಿಗೆ ಇಂತಹ ಸುಂದರ ಕ್ಷಣಗಳನ್ನು ನೀಡಬೇಕು, ಇದು ನಿಜವಾದ ಯಶಸ್ಸು ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net