ನವದೆಹಲಿ: ಶಾಂಘೈ ವಿಮಾನ ನಿಲ್ದಾಣದಲ್ಲಿ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರಿಗೆ ಬಂಧಿಸಿ ಕಿರುಕುಳ ನೀಡಿ, ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಒಪ್ಪಿಕೊಂಡಿಲ್ಲ ಎಂದು ಉದ್ದಟತನ ತೋರಿದ್ದ ಚೀನಾಗೆ, ಕೇಂದ್ರ ಸರ್ಕಾರ(Central government) ತಿರುಗೇಟು ಕೊಟ್ಟಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ, ನಮ್ಮಿಂದ ಬೇರ್ಪಡಿಸಲಾಗದ ಭಾಗ, ಇದು ಸ್ಪಷ್ಟ ಸತ್ಯ. ಚೀನಾದ ಕಡೆಯಿಂದ ಎಷ್ಟೇ ನಿರಾಕರಣೆ ಬಂದರೂ ಈ ನಿರ್ವಿವಾದದ ವಾಸ್ತವ ಬದಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.