ಅನಂತ್ ಅಂಬಾನಿ ಅವರ ನಿರ್ದೇಶನದ ಮೇರೆಗೆ, ತಕ್ಷಣವೇ ಇಕ್ಬಾಲ್ನನ್ನು ಏರ್ಲಿಫ್ಟ್ ಮೂಲಕ ಮುಂಬೈಗೆ ಕರೆತರಲಾಗಿದ್ದು, ಪ್ರಸ್ತುತ ಆತನಿಗೆ ವಿಶೇಷ ಚಿಕಿತ್ಸೆ ಹಾಗೂ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಮುಂಬೈನ ಪ್ರತಿಷ್ಠಿತ 'ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ'ಗೆ (Sir H. N. Reliance Foundation Hospital) ದಾಖಲಿಸಲಾಗಿದೆ. ಹೊಂಡದಲ್ಲೇ ಐದು ವರ್ಷಗಳನ್ನು ಕಳೆದಿದ್ದ ಇಕ್ಬಾಲ್ ಈಗ ದೇಶದ ಪ್ರಮುಖ ವೈದ್ಯಕೀಯ ತಜ್ಞರ ನಿಗಾದಲ್ಲಿ ಆರೈಕೆ ಪಡೆಯುತ್ತಿದ್ದು, ಇದು ಆತನ ಬದುಕಿನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಆತನಿಗೆ ಈಗ ಉತ್ತಮ ಆರೈಕೆ, ಗೌರವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹೊಸ ಭರವಸೆ ಲಭಿಸಿದೆ.