1990 ರಲ್ಲಿ ಜಾರ್ಜ್ ಹೆಚ್.ಡಬ್ಲ್ಯೂ ಬುಷ್ ಅಧ್ಯಕ್ಷರಾಗಿದ್ದಾಗ H-1B ವೀಸಾವನ್ನು ಪರಿಚಯಿಸಲಾಯಿತು. ಈ ಕಾರ್ಯಕ್ರಮವು ಅಮೆರಿಕದಲ್ಲಿ ಅವಕಾಶಗಳನ್ನು ಹುಡುಕುತ್ತಿರುವ ವಿದೇಶಿ ಪ್ರಜೆಗಳಿಗೆ, ವಿಶೇಷವಾಗಿ ಭಾರತೀಯರು ಮತ್ತು ಚೀನಿಯರಿಗೆ ಭಾರಿ ಪ್ರಯೋಜನವನ್ನು ನೀಡಿದೆ. ಅದರೆ, ಸೆಪ್ಟೆಂಬರ್ನಲ್ಲಿ, ಟ್ರಂಪ್ ಆಡಳಿತವು H-1B ವೀಸಾ ಶುಲ್ಕವನ್ನು USD 100,000 ಗೆ ಭಾರಿ ಹೆಚ್ಚಳ ಮಾಡುವುದಾಗಿ ಘೋಷಿಸಿತು. ಇದು ಭಾರತೀಯರಲ್ಲಿ ಭೀತಿ ಉಂಟುಮಾಡಿದೆ,(ಏಜೆನ್ಸೀಸ್).