ಈ ಸುದ್ದಿ ಕೇಳಿ ಪವಾರ್ ತಾಯಿ ಆಶಾ ಅವರಿಗೆ ಆಘಾತವಾಗಬಹುದೆಂದು ಯೋಚಿಸಿದ ವಿಠ್ಠಲ್, ಟಿವಿ ವೈರ್ ಕಡಿತಗೊಳಿಸಿ ಸುದ್ದಿ ಪ್ರಸಾರವಾಗುವುದನ್ನು ನಿಲ್ಲಿಸಿದರು, ಅವರ ಮೊಬೈಲ್ ಫೋನ್ ಫ್ಲೈಟ್ ಮೋಡ್ಗೆ ಹಾಕಿದರು, ತಾಯಿಯ ಮನಸ್ಸಲ್ಲಿ ದುಗುಡ ಮನೆಮಾಡಿತ್ತು, ಇತ್ತ ವಿಠ್ಠಲ್ ಏನೂ ಆಗಿಲ್ಲ ಎಂದು ಧೈರ್ಯ ತುಂಬುತ್ತಿದ್ದರಂತೆ. ಅಜಿತ್ ದಾದಾ ಚೆನ್ನಾಗಿದ್ದಾರೆ, ಅವರಿಗೆ ಸ್ವಲ್ಪ ಗಾಯವಾಗಿರಬೇಕು ಎಂದು ಆಶಾತಾಯಿಗೆ ಮನವರಿಕೆ ಮಾಡಿಸಿದರು ಸಮಾಧಾನಗೊಳ್ಳದ ತಾಯಿಯ ಮನಸ್ಸು ಮಗನನ್ನು ಕಾಣಲು ಹಂಬಲಿಸುತ್ತಲೇ ಇತ್ತು. ಕೊನೆಯಲ್ಲಿ ಅವರು ಬಾರಾಮತಿಗೆ ಹೋಗಬೇಕೆಂದು ನಿರ್ಧರಿಸಿದ್ದರು ಎನ್ನಲಾಗಿದೆ.