ಈ ತುರ್ತು ರಿಪೇರಿಯಿಂದಾಗಿ ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳಲ್ಲಿ ವಿಮಾನಗಳ ವಿಳಂಬ ಮತ್ತು ಟಿಕೆಟ್ ರದ್ದತಿ ಉಂಟಾಗುವ ಸಾಧ್ಯತೆಯಿದೆ. ಅಮೆರಿಕ ಏರ್ಲೈನ್ಸ್ನ 340 ವಿಮಾನಗಳು, ಡೆಲ್ಟಾದ 50ಕ್ಕೂ ಕಡಿಮೆ ವಿಮಾನಗಳು, ಯುನೈಟೆಡ್ನ 6 ಮತ್ತು ಜೆಟ್ಬ್ಲೂ ವಿಮಾನಗಳ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ವೀಕೆಂಡ್ನಲ್ಲಿ ಹಾಲಿಡೇ ಟ್ರಾವೆಲ್ ವಿಳಂಬವಾಗುವುದರಿಂದ ಅನೇಕ ಮಂದಿ ಟಿಕೆಟ್ ಅನ್ನು ರದ್ದು ಮಾಡುವ ಸಾಧ್ಯತೆಗಳಿವೆ. ಯುರೋಪ್ನಲ್ಲಿ Lufthansa, easyJetನ ಕೆಲವು ವಿಮಾನಗಳಲ್ಲಿ ಈಗಾಗಲೇ ಟಿಕೆಟ್ಗಳನ್ನು ರದ್ದು ಮಾಡಲಾಗಿದೆ.