ಬಿಜೆಪಿ ಸೇರಿದರೆ ಭ್ರಷ್ಟಾಚಾರದ ಕಲೆ ಮಾಯವಾಗುತ್ತಾ..? ಎನ್ಡಿಎ ಮೈತ್ರಿ ವಿರುದ್ಧ ಸ್ಟಾಲಿನ್ ಕಿಡಿ | MK Stalin
MK Stalin | ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್
Published on:
Copied
Follow Us
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬಿಜೆಪಿ ಮತ್ತು ಎಐಎಡಿಎಂಕೆಯನ್ನು ವಿರುದ್ಧ ವಾಗ್ದಾಳಿ ನಡೆಸಿದ್ದು, ಏಕಾಂಗಿಯಾಗಿ ಡಿಎಂಕೆಯನ್ನು ಸೋಲಿಸಲು ಸಾಧ್ಯವಾಗದ ಕಾರಣ ಇಬ್ಬರು ಬಲವಂತದಿಂದ ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.
ಎನ್‌ಡಿಟಿವಿ ಶೃಂಗಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ನಾನು ಬಿಜೆಪಿಯನ್ನು ಕೇಳುತ್ತೇನೆ, ನಿಮ್ಮೊಂದಿಗೆ ಇರುವ ಎಲ್ಲರೂ ಭ್ರಷ್ಟರು. ಸುಪ್ರೀಂ ಕೋರ್ಟ್ ಕೂಡ ಎಐಎಡಿಎಂಕೆಗೆ ಶಿಕ್ಷೆ ವಿಧಿಸಿದೆ, ನೀವು ಅವರನ್ನು ವಾಷಿಂಗ್ ಮೆಷಿನ್‌ನಲ್ಲಿ ತೊಳೆದಿದ್ದೀರಾ..? ಎಂದು ಪ್ರಶ್ನಿಸಿದರು.
ನಮ್ಮನ್ನು ವಂಶಪಾರಂಪರ್ಯ ರಾಜಕೀಯಕ್ಕಾಗಿ ಗುರಿಯಾಗಿಸಿಕೊಂಡಿದ್ದಾರೆ, ಸ್ಟಾಲಿನ್ ತಮ್ಮ ಮಗ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ್ದರ ಬಗೆಗಿನ ಟೀಕೆಗಳನ್ನು ಉಲ್ಲೇಖಿಸುತ್ತಾ, ನೀವು ಜನರ ವಿಶ್ವಾಸವನ್ನು ಗೆದ್ದಾಗ ಮಾತ್ರ ಜನರ ಮತಗಳನ್ನು ಪಡೆಯಬಹುದು.
ಎನ್‌ಇಪಿ ಸ್ವೀಕರಿಸದಿದ್ದಕ್ಕಾಗಿ ಬಾಕಿ ಇರುವ ಹಣವನ್ನು ನಾವು ಯಾವಾಗ ಪಡೆಯುತ್ತೇವೆ? ಎಂದು ಪ್ರಶ್ನಿಸಿದ ಸ್ಟಾಲಿನ್, ರಾಜ್ಯ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಿರಾಕರಿಸಿದ ಬಳಿಕ ಸಮಗಿರ ಶಿಖಾ ಯೋಜನೆಯಡಿಯಲ್ಲಿ ಸುಮಾರು 2,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದರು. ಹಿಂದಿಯೇತರ ವಿದ್ಯಾರ್ಥಿಗಳನ್ನು ತ್ರಿಭಾಷಾ ನೀತಿಯ ಮೂಲಕ ಕಲಿಯುವಂತೆ ಕೇಂದ್ರ ಒತ್ತಾಯಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿತ್ತು.
ಕೊಯಮತ್ತೂರು ಮತ್ತು ಮಧುರೈ ಮೆಟ್ರೋ ಯೋಜನೆಗಳ ವಿಳಂಬವನ್ನು ಉಲ್ಲೇಖಿಸಿದ ತಮಿಳುನಾಡು ಸಿಎಂ, ಆ ಯೋಜನೆಗಳಿಗೆ ನಮಗೆ ಯಾವಾಗ ಅನುಮೋದನೆ ಸಿಗುತ್ತದೆ? ಎಂದು ಪ್ರಶ್ನಿಸಿದರು.
ಆರ್ಯ-ದ್ರಾವಿಡ ಯುದ್ಧ
1960 ರ ಸಮಯದಲ್ಲಿನ ಹಿಂದಿ ವಿರೋಧಿ ಆಂದೋಲನಗಳಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಆಚರಿಸಲಾದ ಭಾಷಾ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ಮುಂಬರುವ ದಿನಗಳಲ್ಲಿ ಆರ್ಯ-ದ್ರಾವಿಡ ಯುದ್ಧದ ಹೊಸ ರೂಪವನ್ನು ನೋಡಲಿದೆ ಎಂದು ಹೇಳಿದರು.
ಕೆಲವೇ ವಾರಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದು ತಮಿಳು ಭಾಷೆ, ಸಂಸ್ಕೃತಿ ಮತ್ತು ಗುರುತನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ರಾಜಕೀಯ ಶಕ್ತಿಗಳನ್ನು ಸೋಲಿಸಲು ಒಂದು ಯುದ್ಧಭೂಮಿಯಾಗಲಿದೆ ಎಂದು ಸ್ಟಾಲಿನ್ ಹೇಳಿದರು.
ಮೋದಿ ತಮಿಳುನಾಡಿಗೆ ಬಂದಾಗ ಸೂರ್ಯ ಅಡಗಿ ಮಳೆ ಬಂತು ಎಂದು ಇಪಿಎಸ್ ಹೇಳಿಕೊಂಡಿದ್ದಾರೆ, ನೀವು ನಿಮ್ಮ ಜೀವನದುದ್ದಕ್ಕೂ ನಮಸ್ಕರಿಸುತ್ತಿದ್ದರೆ, ಸೂರ್ಯನನ್ನು ಹೇಗೆ ನೋಡುತ್ತೀರಿ? ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು(ಏಜೆನ್ಸೀಸ್).