'ಟೆಕ್‌ಕ್ರಂಚ್'ಗೆ ನೀಡಿದ ಸಂದರ್ಶನದಲ್ಲಿ ಜೈನಮ್, ತಮ್ಮ ಮ್ಯಾಂಗೋ ಎಂಜಿನ್ (Mango Engine) ಕಂಪನಿಯು ಮಾರ್ಕೆಟಿಂಗ್, ಲೀಡ್ ಮ್ಯಾನೇಜ್‌ಮೆಂಟ್, ಸುದ್ದಿಪತ್ರ (Newsletter) ನಿರ್ವಹಣೆ ಹಾಗೂ ಗ್ರಾಹಕರೊಂದಿಗೆ ಸಂವಹನ ಸೇರಿದಂತೆ ಹಲವು ವ್ಯವಹಾರ ಕಾರ್ಯಗಳನ್ನು AI ಮೂಲಕ ಸರಳಗೊಳಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ. ಈ ವೇದಿಕೆ ಪ್ರಸ್ತುತ ಬೀಟಾ (ಪರೀಕ್ಷಾ) ಹಂತದಲ್ಲಿದ್ದು, ಹಲವು ಕಂಪನಿಗಳು ಆಸಕ್ತಿ ತೋರಿವೆ ಎಂದು ಹೇಳಿದ್ದಾರೆ.