ಸಿಬಿಐ, ಇಡಿ ಬಳಿಕ CBFC ಬಿಜೆಪಿ ಹೊಸ ದಬ್ಬಾಳಿಕೆಯ ಸಾಧನ; ಜನನಾಯಗನ್ ಚಿತ್ರದ ವಿವಾದದ ನಡುವೆ ಸಿಎಂ ಎಂ.ಕೆ.ಸ್ಟಾಲಿನ್ ವಾಗ್ದಾಳಿ

ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ದಳಪತಿ ವಿಜಯ್
ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ದಳಪತಿ ವಿಜಯ್
Published on
ಚೆನ್ನೈ: ತಮಿಳುನಾಡು ಸೇರಿ ದೇಶಾದ್ಯಂತ ಚರ್ಚೆಯಲ್ಲಿರುವ ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(CBFC) ಪ್ರಮಾಣಪತ್ರ ನೀಡದಿರುವ ನಡೆಯ ಬಗ್ಗೆ ಪರೋಕ್ಷವಾಗಿ ದಳಪತಿ ವಿಜಯ್ ಬೆಂಬಲಿಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಸಿಬಿಐ, ಇಡಿ ಬಳಿಕ CBFC ಬಿಜೆಪಿ ಹೊಸ ದಬ್ಬಾಳಿಕೆಯ ಸಾಧನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಟೀಕೆಗೆ ಯಾವುದೇ ಕಾರಣ ನೀಡದೇ ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸ್ಟಾಲಿನ್, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಯ ಬಳಿಕ ಸೆನ್ಸಾರ್ ಮಂಡಳಿ ಕೂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹೊಸ ಅಸ್ತ್ರವಾಗಿದೆ. ಇಂದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ,. 09 ರಂದು ಬಿಡುಗಡೆಯಾಗಬೇಕಿದ್ದ ವಿಜಯ್ ಅವರ ಜನನಾಯಗನ್ ಮತ್ತು ಜ. 10ರಂದು ಬಿಡುಗಡೆಯಾಗಬೇಕಿದ್ದ ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರದ ಹಲವಾರು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಸಿಬಿಎಫ್‌ಸಿ ತೆಗೆದುಹಾಕಿದೆ ಎನ್ನಲಾಗಿದೆ. ಈ ಹಿನ್ನೆಲೆ ಸಿಎಂ ಕೇಂದ್ರ ಸರ್ಕಾರ ಗುರಿಯಾಗಿಸಿ ಕಿಡಿಕಾರಿದ್ದಾರೆ ಎನ್ನಲಾಗಿದೆ.
'ಪರಾಶಕ್ತಿ' ಚಿತ್ರದ ದೃಶ್ಯಗಳ ಕಡಿತ 'ಜನ ನಾಯಗನ್' ಚಿತ್ರದ ಪ್ರಮಾಣೀಕೃತ ಪತ್ರ ನೀಡಲು ವಿಳಂಬದ ಉದ್ದೇಶವೇನೆಂಬುದರ ಸಿಬಿಎಫ್​ಸಿ ನಡೆಯ ಬಗ್ಗೆ ತಮಿಳುನಾಡಿನಲ್ಲಿ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು ತಮಿಳುನಾಡಿನ ರಾಜಕೀಯವಾಗಿ ಈ ನಿರ್ಧಾರವನ್ನು ಖಂಡಿಸಬೇಕು ಒತ್ತಾಯಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘಟನೆ ಯಾವುದೇ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೇ ಎಲ್ಲರೂ ಸಿಬಿಎಫ್​ಸಿ ನಡೆಯನ್ನು ವಿರೋಧಿಸಬೇಕೆಂದು ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net