

Guruvayur Temple: ಕೇರಳದ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯದಲ್ಲಿ ಇಂದು ಕೇವಲ ಏಳು ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 416 ವಿವಾಹಗಳು ನೆರವೇರುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದು ಈ ದೇವಾಲಯದ ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತ್ಯಂತ ಹೆಚ್ಚಿನ ಸಂಖ್ಯೆಯ ಮದುವೆಗಳಾಗಿವೆ ಎಂದು ದೇವಸ್ವಂ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡೇ ಗಂಟೆಯಲ್ಲಿ 137 ಮದುವೆ!...
ಮದುವೆಗಳಿಗಾಗಿ ದೇವಾಲಯದ ಪ್ರಾಂಗಣದಲ್ಲಿ ಆರು ವಿಶೇಷ ಮಂಟಪಗಳನ್ನು ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯೊಂದು ವಿವಾಹ ತಂಡಕ್ಕೂ ಟೋಕನ್ ನೀಡಲಾಗಿತ್ತು ಮತ್ತು ಜನಸಂದಣಿಯನ್ನು ತಡೆಯುವ ಉದ್ದೇಶದಿಂದ ವಧು-ವರರೊಂದಿಗೆ ಬರುವ ಜನರ ಸಂಖ್ಯೆಯನ್ನು ಗರಿಷ್ಠ 24 ಕ್ಕೆ ಸೀಮಿತಗೊಳಿಸಲಾಗಿತ್ತು. ಆರು ಮಂಟಪಗಳಲ್ಲಿ ಪ್ರತಿ ಗಂಟೆಗೆ 60 ಕ್ಕೂ ಹೆಚ್ಚು ವಿವಾಹಗಳು ನೆರವೇರಿದವು. ಆರಂಭದ ಎರಡು ಗಂಟೆಗಳ ಒಳಗಾಗಿಯೇ ಸುಮಾರು 137 ವಿವಾಹಗಳು ನಡೆದಿದ್ದವು ಎಂದು ಗೋಪಿನಾಥ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ಇಲಾಖೆಯಿಂದ ಭದ್ರತೆ!..